×
Ad

ಬ್ರಿಟನ್: ಮೊದಲ ಆ್ಯಸ್ಟ್ರಝೆನೆಕ ಲಸಿಕೆ 82 ವರ್ಷದ ವ್ಯಕ್ತಿಗೆ

Update: 2021-01-04 23:19 IST

 ಲಂಡನ್, ಜ. 4: ಆಕ್ಸ್‌ಫರ್ಡ್-ಆ್ಯಸ್ಟ್ರಝೆನೆಕ ಕೊರೋನ ವೈರಸ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಬ್ರಿಟನ್ ಸೋಮವಾರ ಆರಂಭಿಸಿದೆ.

ಬ್ರಿಟನ್‌ನಲ್ಲಿ ಕೊರೋನ ವೈರಸ್ ರೋಗಿಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿರುವಂತೆಯೇ, ಆ್ಯಸ್ಟ್ರಝೆನೆಕ ಲಸಿಕೆಯ 5,30,000 ಡೋಸ್‌ಗಳನ್ನು ಮೊದಲ ಹಂತದಲ್ಲಿ ಜನರಿಗೆ ನೀಡಲಾಗುತ್ತಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಆ್ಯಸ್ಟ್ರಝೆನೆಕ ಔಷಧ ತಯಾರಿಕಾ ಕಂಪೆನಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೋನ ವೈರಸ್ ಲಸಿಕೆಯು ಸಾಂಕ್ರಾಮಿಕ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದಾಗಿದೆ ಎಂದು ಹಲವು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ, ಈ ಲಸಿಕೆಯನ್ನು ಸಂಗ್ರಹಿಸಿಡಲು ಅತ್ಯಂತ ಶೀತಲ ಶೈತ್ಯಾಗಾರಗಳು ಬೇಕಾಗಿಲ್ಲ. ಫೈಝರ್-ಬಯೋಎನ್‌ಟೆಕ್ ಮತ್ತು ಮೋಡರ್ನಾ ಅಭಿವೃದ್ಧಿಪಡಿಸಿರುವ ಇತರ ಎರಡು ಕೊರೋನ ವೈರಸ್ ಲಸಿಕೆಗಳನ್ನು ಅತಿ ಶೀತಲ ಉಷ್ಣತೆಯಲ್ಲಿ ಸಂಗ್ರಹಿಸಿಡಬೇಕಾಗುತ್ತದೆ.

ಮೊದಲ ಆಕ್ಸ್‌ಫರ್ಡ್-ಆ್ಯಸ್ಟ್ರಝೆನೆಕ ಲಸಿಕೆಯನ್ನು 82 ವರ್ಷದ ವ್ಯಕ್ತಿಯೊಬ್ಬರಿಗೆ ಆಕ್ಸ್‌ಫರ್ಡ್‌ನ ಚರ್ಚಿಲ್ ಆಸ್ಪತ್ರೆಯಲ್ಲಿ ನೀಡಲಾಯಿತು ಎಂದು ಎನ್‌ಎಚ್‌ಎಸ್ ಇಂಗ್ಲೆಂಡ್ ತಿಳಿಸಿದೆ.

ಬ್ರಿಟನ್‌ನಲ್ಲಿ ಈಗಾಗಲೇ ಸುಮಾರು 10 ಲಕ್ಷ ಜನರಿಗೆ ಫೈಝರ್ ಕೊರೋನ ವೈರಸ್ ಲಸಿಕೆಯನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News