ಓಹಿಯೊ ಸೆನೆಟ್ ಸದಸ್ಯರಾಗಿ ಭಾರತೀಯ ಅಮೆರಿಕನ್ ಪ್ರಮಾಣ
Update: 2021-01-05 22:15 IST
ವಾಶಿಂಗ್ಟನ್, ಜ. 5: ಭಾರತ ಮೂಲದ ನೀರಜ್ ಅಂತಾನಿ ಓಹಿಯೊ ರಾಜ್ಯದ ಸೆನೆಟರ್ ಆಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ರಾಜ್ಯದ ಸೆನೆಟ್ ಪ್ರವೇಶಿಸಿರುವ ಮೊದಲ ಭಾರತೀಯ ಅಮೆರಿಕನ್ ಆಗಿದ್ದಾರೆ.
‘‘ನಾನು ಹುಟ್ಟಿ ಬೆಳೆದ ಸಮುದಾಯವನ್ನು ರಾಜ್ಯದ ಸೆನೆಟ್‌ನಲ್ಲಿ ಪ್ರತಿನಿಧಿಸಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ’’ ಎಂದು ಪ್ರಮಾಣವಚನ ಸಮಾರಂಭದ ಬಳಿಕ ಮಾತನಾಡಿದ 29 ವರ್ಷದ ನೀರಜ್ ಹೇಳಿದರು. ಅವರು ನಾಲ್ಕು ವರ್ಷಗಳ ಪೂರ್ಣ ಅಧಿಕಾರಾವಧಿಯನ್ನು ಹೊಂದಿರುತ್ತಾರೆ.
ಇದಕ್ಕೂ ಮೊದಲು, 2014ರಿಂದ ಅವರು 42ನೇ ಓಹಿಯೊ ಜಿಲ್ಲೆಯನ್ನು ಓಹಿಯೊ ರಾಜ್ಯ ಶಾಸಕಾಂಗದ ಇನ್ನೊಂದು ಘಟಕವಾಗಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಪ್ರತಿನಿಧಿಸಿದ್ದರು. ಅವರು ಆ ಸಂದರ್ಭದಲ್ಲಿ ರಾಜ್ಯ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅತಿ ಕಿರಿಯ ಸದಸ್ಯರಾಗಿದ್ದರು.