ಜಾನಪದ ಅಕಾಡಮಿ ಪ್ರಶಸ್ತಿ ಪುರಸ್ಕತರ ಪಟ್ಟಿ ಪ್ರಕಟ: ಬಂಟ್ವಾಳದ ಗೋಪಾಲಕೃಷ್ಣ, ರಮೇಶ್ ಕಲ್ಮಾಡಿ ಸಹಿತ ಹಲವರು ಆಯ್ಕೆ

Update: 2021-01-05 16:46 GMT

ಮಂಗಳೂರು, ಜ.5: ಪ್ರಸ್ತುತ ಸಾಲಿನ ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿ ಪುರಸ್ಕತರ ಪಟ್ಟಿ ಪ್ರಕಟಿಸಲಾಗಿದೆ. ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಗೋಪಾಲಕೃಷ್ಣ ಬಂಗೇರಾ ಮಧ್ವ (ಗೊಂಬೆ ಕುಣಿತ), ಉಡುಪಿಯ ಕಲ್ಮಾಡಿ ಗ್ರಾಮದ ರಮೇಶ್ ಕಲ್ಮಾಡಿ (ಕರಗ ಕೋಲಾಟ) ಸಹಿತ ವಿವಿಧ ಕ್ಷೇತ್ರದಲ್ಲಿ ಹಲವರು ಆಯ್ಕೆಯಾಗಿದ್ದಾರೆ.

ಬೆಂಗಳೂರು ಆನೇಕಲ್ ತಾಲೂಕಿನ ಚಂದಾಪುರದ ಎಂ.ಕೆ. ಸಿದ್ದರಾಜು (ಜಾನಪದ ಗಾಯನ), ನೆಲಮಂಗಲ ತಾಲೂಕಿನ ಹೊನ್ನಸಂದ್ರದ ಹೊನ್ನಗಂಗಮ್ಮ (ಸೋಬಾನೆ ಪದ), ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕಸಬಾ ಹೋಬಳಿಯ ಬ್ರಹ್ಮಣಿಪುರದ ತಿಮ್ಮಯ್ಯ (ತಮಟೆ ವಾದನ), ಕೋಲಾರ ತಾಲೂಕಿನ ಮಲ್ಲನಾಯಕನಹಳ್ಳಿಯ ನಾಗಮಂಗಲದ ಕೆ.ಎನ್. ಚಂಗಪ್ಪ (ಭಜನೆ ತತ್ವಪದ), ಚಿಕ್ಕಬಳ್ಳಾಪುರ ತಾಲೂಕಿನ ಕೇತೇನಹಳ್ಳಿರಸ್ತೆಯ ನಾರಾಯಣಪ್ಪ(ಕೀಲು ಕುದುರೆ), ತುಮಕೂರು ಶಿರಾ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಸಿ.ವಿ. ವೀರಣ್ಣ (ವೀರಭದ್ರನ ಕುಣಿತ) ಪುರಸ್ಕೃತರ ಪಟ್ಟಿಯಲ್ಲಿದ್ದಾರೆ.

ದಾವಣಗೆರೆಯ ಜಗಳೂರು ತಾಲೂಕಿನ ಸಿದ್ದಮ್ಮನಹಳ್ಳಿಯ ಭಾಗ್ಯಮ್ಮ (ಸೋಬಾನೆ ಹಾಡುಗಾರಿಕೆ), ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಗೊಲ್ಲರ ಹಟ್ಟಿಯ ಕೆಂಚಮ್ಮ (ಮದುವೆ ಹಾಡು), ಶಿವಮೊಗ್ಗದ ವಿನೋಬಾ ನಗರದ ಕೆ. ಯುವರಾಜು (ಜಾನಪದ ಹಾಡುಗಾರಿಕೆ), ಮೈಸೂರಿನ ವಿದ್ಯಾರಣ್ಯಪುರಂನ ಸುಯೋಜ ಫಾರಂ ರಸ್ತೆಯ ಕುಮಾರಸ್ವಾಮಿ (ಕಂಸಾಳೆ ಹಾಡುಗಾರಿಕೆ), ಮಂಡ್ಯದ ಮಳವಳ್ಳಿ ತಾಲೂಕಿನ ದೇವಿಪುರದ ಭೂಮಿಗೌಡ (ಕೋಲಾಟ), ಹಾಸನದ ಅರಸೀಕೆರೆ ತಾಲೂಕಿನ ಕಂಚಮಾರನಹಳ್ಳಿಯ ಗ್ಯಾರಂಟಿ ರಾಮಣ್ಣ (ಹಾಡುಗಾರಿಕೆ), ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನ ಚೌಳ ಹಿರಿ ಯೂರು ಗ್ರಾಮದ ಭೋಗಪ್ಪ ಎಂ.ಸಿ. (ಚೌಡಿಕೆ ಪದ), ಮಡಿಕೇರಿ ತಾಲೂಕಿನ ಪಾಡಿ ಗ್ರಾಮದ ಕೆ.ಕೆ. ಪೊನ್ನಪ್ಪ (ಬೊಳೋ ಪಾಟ್), ಚಾಮರಾಜನಗರ ತಾಲೂಕಿನ ಹೊನ್ನಮ್ಮ (ಸೋಬಾನೆ ಪದ), ಬೆಳಗಾವಿಯ ಮೂಡಲಗಿ ತಾಲೂಕಿನ ಮುತ್ತಪ್ಪ ಅಲ್ಲಪ್ಪ ಸವದಿ (ತತ್ವಪದ), ಧಾರವಾಡದ ಕುಂದಗೋಳ ತಾಲೂಕಿನ ಮಲ್ಲೇಶಪ್ಪ ಫಕ್ಕೀರಪ್ಪ ತಡಸದ (ತತ್ವಪದ), ವಿಜಯಪುರದ ಬಬಲೇಶ್ವರ ತಾಲೂಕಿನ ನಿಡೀಡಿ ಗ್ರಾಮದ ಸುರೇಶ ರಾಮಚಂದ್ರ ಜೋಶಿ (ಡೊಳ್ಳಿನ ಹಾಡುಗಾರಿಕೆ) ಆಯ್ಕೆಯಾಗಿದ್ದಾರೆ.

ಬಾಗಲಕೋಟೆಯ ಕೃಷ್ಣಪ್ಪ ಮಲ್ಲಪ್ಪ ಬೆಣ್ಣೂರ (ತತ್ವಪದ ಮತ್ತು ಭಜನೆ), ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಇಂದೂರ ಗ್ರಾಮದ ಸಹದೇವಪ್ಪ ಈರಪ್ಪ ನಡಗೇರಾ (ಲಾವಣಿ ಪದ), ಹಾವೇರಿಯ ಶಿಗ್ಗಾಂವಿ ತಾಲೂಕಿನ ಕ್ಯಾಲಗೊಂಡ ಗ್ರಾಮದ ಬಸವರಾಜ ತಿರುಕಪ ಶಿಗ್ಗಾಂವಿ (ತತ್ವಪದ), ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸಾಕೀನಭಲೇ ಹೊಸೂರಿನ ಮುತ್ತಪ್ಪ ರೇವಣಪ್ಪ ರೋಣ (ಪುರವಂತಿಕೆ), ಕಲಬುರ್ಗಿ ತಾಲೂಕಿನ ಕಪನೂರು ಗ್ರಾಮದ ಸಾಯಬಣ್ಣ (ಹಲಗೆ ವಾದನ), ಬೀದರ ಜಿಲ್ಲೆಯ ಹುಲಸೂರು ತಾಲೂಕಿನ ವೈಜಿನಾಥಯ್ಯ ಸಂಗಯ್ಯ ಸ್ವಾಮಿ (ಚಕ್ರಿ ಭಜನೆ), ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಜಂಬಣ್ಣ (ಹಗಲುವೇಷ), ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಿಯ ತಿಪ್ಪಣ್ಣ ಅಂಬಾಜಿ ಸುಗತೇಕರ (ಗೋಂದಳಿ ಪದ), ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಗಳ್ಳಿ ತಾಲೂಕಿನ ಹಂಪಾಪಟ್ಟಣದ ಗೋಂದಳಿ ರಾಮಪ್ಪ(ಗೋಂದಳಿ ಪದ), ಯಾದಗಿರಿ ಜಿಲ್ಲೆಯ ಶಹಪೂರಾ ತಾಲೂಕಿನ ಗೋಗಿ ಬಸವ ಲಿಂಗಮ್ಮ (ಮದುವೆ ಹಾಡು), ಆಯ್ಕೆಯಾಗಿದ್ದಾರೆ.

ತಜ್ಞ ಪ್ರಶಸ್ತಿಯಾದ ಡಾ. ಜೀ.ಶಂ.ಪ. ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಗಾಯತ್ರಿ ನಾವಡ, ಡಾ. ಗದ್ದಗೀಮಠ ಪ್ರಶಸ್ತಿಗೆ ಕಲಬುರ್ಗಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಬಸವರಾಜು ಸಬರದ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News