ಬ್ಯುಟಿಷಿಯನ್ ಕೋರ್ಸ್ ಹೋದ ವಿವಾಹಿತೆ ನಾಪತ್ತೆ

Update: 2021-01-05 16:47 GMT

ಬ್ರಹ್ಮಾವರ, ಜ.5: ಬ್ಯುಟಿಷಿಯನ್ ಕೋರ್ಸ್ ಹೋದ ವಿವಾಹಿತೆ ನಾಪತ್ತೆ ಯಾಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದವರನ್ನು ಕಾರ್ಕಳ ಜಾರ್ಕಳ ನಿರ್ಜಬೈಲು ನಿವಾಸಿ ವಿಶ್ವನಾಥ ಪೂಜಾರಿ ಎಂಬವರ ಪತ್ನಿ ಸೌಮ್ಯ (23) ಎಂದು ಗುರುತಿಸಲಾಗಿದೆ. ಹೆರಿಗೆ ಗಾಗಿ ತವರು ಮನೆಯಾದ ಬ್ರಹ್ಮಾವರ ಹಾರಾಡಿ ಗ್ರಾಮದ ಕುಕ್ಕುಡೆ ಎಂಬಲ್ಲಿ ವಾಸವಾಗಿದ್ದ ಇವರು, ಕಳೆದ ಒಂದು ತಿಂಗಳಿನಿಂದ ಬ್ರಹ್ಮಾವರದಲ್ಲಿ ಬ್ಯುಟಿಷಿ ಯನ್ ಕೋರ್ಸ್‌ಗೆ ಹೋಗುತ್ತಿದ್ದರು.

ಜ.1ರಂದು ಬೆಳಗ್ಗೆ ಮನೆಯಿಂದ ಕೋರ್ಸ್‌ಗೆ ಹೋಗುವುದಾಗಿ ಹೇಳಿ ಹೋದ ಸೌಮ್ಯ ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News