ಮುಟ್ಟುಗೋಲು ಹಾಕಲಾದ ಹಣ ಬಿಡುಗಡೆಗೆ ಒತ್ತಡ?

Update: 2021-01-05 17:15 GMT

ಅಮೆರಿಕದ ಆರ್ಥಿಕ ದಿಗ್ಬಂಧನದಡಿಯಲ್ಲಿ ಮುಟ್ಟುಗೋಲು ಹಾಕಲಾಗಿರುವ ತನ್ನ 7 ಬಿಲಿಯ ಡಾಲರ್ (ಸುಮಾರು 51,235 ಕೋಟಿ ರೂಪಾಯಿ) ಹಣವನ್ನು ಬಿಡುಗಡೆ ಮಾಡುವಂತೆ ದಕ್ಷಿಣ ಕೊರಿಯದ ಮೇಲೆ ಒತ್ತಡ ಹೇರುವುದಕ್ಕಾಗಿ ಇರಾನ್ ಆ ದೇಶದ ತೈಲ ಟ್ಯಾಂಕರನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಲಾಗಿದೆ.

ಅಮೆರಿಕದ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ವಿಧಿಸಿರುವ ಆರ್ಥಿಕ ದಿಗ್ಬಂಧನಗಳನ್ನು ಇನ್ನೆರಡು ವಾರಗಳಲ್ಲಿ ನೂತನ ಅಧ್ಯಕ್ಷರಾಗಲಿರುವ ಜೋ ಬೈಡನ್ ತೆರವುಗೊಳಿಸಬೇಕೆಂದು ಇರಾನ್ ಬಯಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News