ಬ್ಯಾರಿ ಅಕಾಡಮಿಯಿಂದ ರಾಶ್ ಬ್ಯಾರಿಗೆ 'ಗೌರವ ಪುರಸ್ಕಾರ' ಪ್ರದಾನ
Update: 2021-01-06 16:11 IST
ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2020 ನೇ ಸಾಲಿನ ಗೌರವ ಪುರಸ್ಕಾರವನ್ನು ಬ್ಯಾರಿ ಸಂಘಟನೆಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಶ್ ಬ್ಯಾರಿ ಇವರಿಗೆ ಬುಧವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮಕ್ಕೆ ಕಾರಣಾಂತರಗಳಿಂದ ಹೋಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರು ಅಕಾಡಮಿಯ ಕಚೇರಿಯಲ್ಲಿ ಅಕಾಡಮಿ ಅಧ್ಯಕ್ಷರಾದ ರಹೀಂ ಉಚ್ಚಿಲ್ ಅವರು ಗೌರವಿಸಿ, ಸನ್ಮಾನಿಸಿದರು.