ಆಹಾರ ಪರವಾನಗಿ, ನೊಂದಾವಣಿಗೆ ಅರ್ಜಿ ಆಹ್ವಾನ
Update: 2021-01-06 20:29 IST
ಉಡುಪಿ, ಜ.6:ಜಿಲ್ಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಡಿಯಲ್ಲಿ ಆಹಾರ ಪರವಾನಗಿ/ ನೊಂದಾವಣಿ ಪಡೆಯಲು ಆನ್‌ಲೈನ್ -https://foscos.fssai.gov.in-ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈಗಾಗಲೇ ಇನ್ನಿತರ ಅನಧಿಕೃತ ವೆಬ್‌ಸೈಟ್‌ನಲ್ಲಿ ಆಹಾರ ಪರವಾನಗಿ / ನೊಂದಾವಣಿಗೆ ಅರ್ಜಿ ಸಲ್ಲಿಸಿರುವ ಆಹಾರ ವಹಿವಾಟುದಾರರು ಮೋಸ ಹೋಗಿ ಹಣ ಕಳೆದುಕೊಂಡಿರುವ ದೂರುಗಳು ಇಲಾಖೆಗೆ ಬಂದಿದ್ದು, ಸಾರ್ವಜನಿಕರು ಆನ್‌ಲೈನ್ ವಂಚನೆಗೆ ಒಳಗಾಗದಂತೆ ಮತ್ತು ಹೆಚ್ಚಿನ ಮಾಹಿತಿಗಾಗಿ ಅಂಕಿತ ಅಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಟಿಬಿ ಆಫೀಸ್, ಅಜ್ಜರಕಾಡು, ಉಡುಪಿ ದೂರವಾಣಿ ಸಂಖ್ಯೆ: 0820-2522880 ನ್ನು ಸಂಪರ್ಕಿಸುವಂತೆ ಜಿಲ್ಲಾ ಅಂಕಿತ ಹಾಗೂ ಆಹಾರ ಸುರಕ್ಷತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.