×
Ad

ಸಿಟಿ ಗೋಲ್ಡ್‌ನಿಂದ ‘ಮೆಗಾ ಮಂಗಳೂರು ಫೆಸ್ಟ್’: 6ನೇ ವಾರದ ಲಕ್ಕೀ ಡ್ರಾ ಸಮಾರಂಭ

Update: 2021-01-06 20:39 IST

ಮಂಗಳೂರು, ಜ.6: ಪ್ರತಿಷ್ಠಿತ ಆಭರಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಸಿಟಿ ಗೋಲ್ಡ್‌ನ 20ನೇ ವಾರ್ಷಿಕೋತ್ಸವ ಪ್ರಯುಕ್ತ ನಗರದ ಕಂಕನಾಡಿ ಬೈಪಾಸ್ ರಸ್ತೆಯಲ್ಲಿನ ಸಿಟಿ ಗೋಲ್ಡ್ ಮಳಿಗೆಯಲ್ಲಿ ‘ಮೆಗಾ ಮಂಗಳೂರು ಫೆಸ್ಟ್’ ಆಯೋಜಿಸಿದೆ. ಈ ಪ್ರಯುಕ್ತ ಆರನೇ ವಾರದ ಲಕ್ಕೀ ಡ್ರಾ ಸಮಾರಂಭವು ಬುಧವಾರ ಸಂಜೆ ನಡೆಯಿತು.

ಆರನೇ ಲಕ್ಕೀ ಡ್ರಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಎಚ್‌ಎಂ ಫೌಂಡೇಶನ್‌ನ ಟೀಮ್ ಹೆಡ್ ಮುಹಮ್ಮದ್ ಸಾಲೇಹ್, ಸಂಸ್ಥೆಯು ವ್ಯಾಪಾರದ ಜೊತೆಗೆ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿರುವುದು ಸ್ವಾಗತಾರ್ಹ. ಜನರ ಪ್ರೀತಿ, ವಿಶ್ವಾಸ ಗಳಿಸಲು ಸಂಸ್ಥೆಯು ಕೊಡುಗೆ ನೀಡುತ್ತಿದೆ. ವರ್ಷದಿಂದ ವರ್ಷಕ್ಕೆ ಸಂಸ್ಥೆ ಏಳಿಗೆ ಕಾಣುತ್ತಿದೆ. ಮುಂದಿನ ದಿನಗಳಲ್ಲೂ ಸಂಸ್ಥೆಯ ಇನ್ನಷ್ಟು ಮಳಿಗೆಗಳು ತಲೆ ಎತ್ತಲಿ ಎಂದು ಶುಭ ಹಾರೈಸಿದರು.

6ನೇ ವಾರದ ಲಕ್ಕೀ ಕೂಪನ್‌ನ್ನು ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಶಿಕ್ಷಕಿ ಬಬಿತಾ ಮೋಹನ್ ಆಯ್ಕೆ ಮಾಡಿದರು. 6ನೇ ಲಕ್ಕಿ ಡ್ರಾ ವಿಜೇತರಾಗಿ ಜುನೈದ್ ಮದಕ ಅಂಬ್ಲಮೊಗರು ಆಯ್ಕೆಯಾದರು. ಐದನೇ ವಾರದ ಲಕ್ಕೀ ಡ್ರಾದ ಅದೃಷ್ಟಶಾಲಿ ಮುಹಮ್ಮದ್ ನಝೀರ್ ಬಜಾಲ್ ಅವರಿಗೆ ಡೈಮಂಡ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಮ್ಯಾನೇಜಿಂಗ್ ಟ್ರಸ್ಟಿ ಸನಾ ಅಲ್ತಾಫ್ ಡೈಮಂಡ್ ರಿಂಗ್ ನೀಡಿದರು.

ಪಿಎಫ್‌ಎ ಲಕ್ಕಿ ಡ್ರಾ ಕೂಪನ್‌ನ್ನು ಮೆಡಿಕಲ್ ಲ್ಯಾಬೊರೇಟರಿ ಟೆಕ್ಸಿಶಿಯನ್ ಮುಫಿಝಾ ಆಯ್ಕೆ ಮಾಡಿದರು. ಪಿಎಫ್‌ಎ ಸ್ಕೀಮ್‌ನ ಅದೃಷ್ಟಶಾಲಿಯಾಗಿ ಖಾಲೀದ್ ತೆಕ್ಕಾರ್ ಆಯ್ಕೆಯಾದರು. 

ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಇಂಟರ್ ನ್ಯಾಶನಲ್ ಮಂಗಳೂರು ಮಾಜಿ ಪ್ರಾದೇಶಿಕ ಚೇರ್‌ಮನ್ ಎಲ್.ಎನ್. ಮೋಹನ್, ಸಿಟಿಗೋಲ್ಡ್ ಸಂಸ್ಥೆಯ ಮ್ಯಾನೇಜರ್ ಅಹ್ಮದ್ ಹಾಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ., ಸಂಸ್ಥೆಯ ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ಬಂಪರ್ ಬಹುಮಾನ: ಸಿಟಿ ಗೋಲ್ಡ್‌ನ ಮೆಗಾ ಮಂಗಳೂರು ಫೀಸ್ಟ್ ಅಂಗವಾಗಿ ಗ್ರಾಹಕರಿಗೆ ಬಂಪರ್ ಬಹುಮಾನಗಳನ್ನು ಪ್ರಕಟಿಸಲಾ ಗುತ್ತಿದೆ. ಎಕ್ಸ್‌ಕ್ಲೂಸಿವ್ ಡೈಮಂಡ್ ನೆಕ್ಲೆಸ್‌ನ್ನು ಬಂಪರ್ ಬಹುಮಾನವಾಗಿ ಗೆಲ್ಲುವ ಸುವರ್ಣಾವಕಾಶವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ.

ವೀಕ್ಲಿ ಲಕ್ಕೀ ಡ್ರಾ: ಸಿಟಿ ಗೋಲ್ಡ್‌ನಿಂದ ಗ್ರಾಹಕರಿಗಾಗಿ ಹಲವು ವಿಶೇಷ ಕೊಡುಗೆಗಳನ್ನು ಸಮರ್ಪಿಸುತ್ತಿದ್ದು, ಪ್ರತೀ ವಾರವೂ ಲಕ್ಕೀ ಡ್ರಾ ಹಮ್ಮಿಕೊಳ್ಳಲಾಗಿದೆ. ನೊರಾ ಇಟಾಲಿಯನ್ ಕಲೆಕ್ಷನ್ಸ್, ಕೆನ್ನಾ ಯುನಿಕ್ ಡೈಮಂಡ್ಸ್ ಪ್ರದರ್ಶನ, ಮಾರಾಟವನ್ನು ಆಯೋಜಿಸಲಾಗುತ್ತಿದೆ.

ಮೇಕಿಂಗ್ ಚಾರ್ಜೆಸ್ ಕಡಿತ: ಗೋಲ್ಡ್‌ನಲ್ಲಿ ಶೇ.55, ಡೈಮಂಡ್ಸ್‌ನಲ್ಲಿ ಶೇ.25, ಅನ್‌ಕಟ್ ಆಭರಣಗಳಲ್ಲಿ ಶೇ.25 ರಷ್ಟು ಕಡಿತದ ಸೌಲಭ್ಯವನ್ನು ಸಂಸ್ಥೆ ಒದಗಿಸುತ್ತಿದೆ. ಅಲ್ಲದೆ, ಬೆಲೆಬಾಳುವ ನೆಕ್ಲೇಸ್ ಮೇಲೆ ಯಾವುದೇ ರೀತಿಯ ಮೇಕಿಂಗ್ ಚಾರ್ಜೆಸ್ ಇರುವುದಿಲ್ಲ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News