2.5 ಕಿ.ಗ್ರಾಂ ಗಾಂಜಾ ಪತ್ತೆ: ಮೂವರ ಬಂಧನ
Update: 2021-01-06 20:58 IST
ಮಂಗಳೂರು, ಜ.6: ಡ್ರಗ್ಸ್ ಮಾರಾಟಗಾರರ ಪರೇಡ್ ನಡೆದ ಬೆನ್ನಲ್ಲೇ ಬುಧವಾರ ನಗರದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ನಾರ್ಕೋಟಿಕ್ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಸಂತೋಷ್ ಅಹಿರ್ (29), ದಿಲೀಪ್ ನಾಗರಾವ್ (41), ಜೆಪ್ಪು ಮಾರ್ನಮಿಕಟ್ಟೆ ನಿವಾಸಿ ಇಮ್ರಾನ್ ಝುಬೈರ್ (32) ಬಂಧಿತ ಆರೋಪಿಗಳು.
ಆರೋಪಿಗಳಿಂದ 75 ಸಾವಿರ ರೂ. ಮೌಲ್ಯದ 2.5 ಕಿ.ಗ್ರಾಂ. ಗಾಂಜಾ ವಶಪಡಿಸಿಕೊಂಡಿದ್ದಾರೆ. 30 ಸಾವಿರ ರೂ. ಮೌಲ್ಯದ ಆಕ್ಟಿವಾ, 11,500 ರೂ. ಮೌಲ್ಯದ ಮೂರು ಮೊಬೈಲ್‌ಗಳು, 1,030 ರೂ. ನಗದು ವಶಕ್ಕೆ ಪಡೆಯಲಾಗಿದೆ. ಸ್ವಾಧೀನಪಡಿಸಿಕೊಳ್ಳಲಾದ ಸೊತ್ತಿನ ಮೌಲ್ಯ 1.17 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಗಳು ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಗಾಂಜಾ ತಂದಿದ್ದರು ಎನ್ನುವುದು ವಿಚಾರಣೆ ಸಂದರ್ಭ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ