ಕೋವಿಡ್ ವ್ಯಾಕ್ಸಿನೇಷನ್ : ದ.ಕ.ಜಿಲ್ಲೆಯ 39,604 ಮಂದಿ ನೋಂದಣಿ

Update: 2021-01-06 16:40 GMT

ಮಂಗಳೂರು, ಜ.6: ದ.ಕ. ಜಿಲ್ಲೆಯಲ್ಲಿ ಮೊದಲ ಹಂತದ ಕೋವಿಡ್-19ರ ವ್ಯಾಕ್ಸಿನೇಷನ್‌ಗಾಗಿ ಎಲ್ಲ ಸರಕಾರಿ/ ಖಾಸಗಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯ-ಸಿಬ್ಬಂದಿ/ ವಿದ್ಯಾರ್ಥಿಗಳು, ಮಹಿಳಾ-ಮಕ್ಕಳ ಇಲಾಖೆಯ ಅಧಿಕಾರಿ/ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ 39,604 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಸಂಸ್ಥೆಗಳಲ್ಲಿರುವ ನೋಂದಣಿಗೆ ಬಾಕಿ ಇರುವ ಅಧಿಕಾರಿ/ಸಿಬ್ಬಂದಿಯು ತಮ್ಮ ವಿವರಗಳನ್ನು ಕೂಡಲೇ ಆರೋಗ್ಯ ಇಲಾಖೆಗೆ dkrcho.covidvacc2020@gmail.com ಜ.7ರಂದು ರಾತ್ರಿ 12 ಗಂಟೆಯೊಳಗೆ ನೀಡಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News