ಮದನೀಸ್ ಬಂಟ್ವಾಳ ತಾಲೂಕು ಸಮಿತಿ ಮಹಾಸಭೆ: ನೂತನ ಅಧ್ಯಕ್ಷರಾಗಿ ಸಲೀಂ ಮದನಿ ಬೈರಿಕಟ್ಟೆ ಆಯ್ಕೆ

Update: 2021-01-06 18:02 GMT

ಬಂಟ್ವಾಳ: ಮದನೀಸ್ ಅಸೋಸಿಯೇಷನ್ ಬಂಟ್ವಾಳ ತಾಲೂಕು ಸಮಿತಿಯ ಮಹಾಸಭೆಯು ಮಂಗಳವಾರ ಬೆಳಗ್ಗೆ ಹಿದಾಯತುಲ್ ಇಸ್ಲಾಂ ಕೊಳಕೆಯಲ್ಲಿ ಅಧ್ಯಕ್ಷರಾದ ಕೆ.ಬಿ ಅಬ್ದುರ್ರಹ್ಮಾನ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯನ್ನು ಮದನೀಸ್ ದ.ಕ ಜಿಲ್ಲಾ ವೆಸ್ಟ್‌ ಅಧ್ಯಕ್ಷ ಯು.ಕೆ ಅಬೂಬಕ್ಕರ್ ಮದನಿ ಮುದುಂಗಾರು ಕಟ್ಟೆ ಉದ್ಘಾಟಿಸಿದರು. ಬಳಿಕ ಪ್ರ.ಕಾರ್ಯದರ್ಶಿ ಮುಹಮ್ಮದ್ ರಫೀಖ್ ಮದನಿ ಪಾಟ್ರಕೋಡಿ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಯು.ಕೆ ಅಬೂಬಕ್ಕರ್ ಮದನಿ ಲೆಕ್ಕ ಪತ್ರ ಮಂಡನೆ ಮಾಡಿದರು. ಉಡುಪಿ ಜಿಲ್ಲೆಯ ಸಹಾಯಕ ಖಾಝಿ ಅಬ್ದುಲ್ ರಹಿಮಾನ್ ಮದನಿ ಮೂಳೂರು ಉಸ್ತಾದರಿಗೆ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಹಕೀಂ ಮದನಿ ಕರೋಪಾಡಿ ಶುಭ ಹಾರೈಸಿ ಮಾತಾನಾಡಿದರು. ಕೇಂದ್ರ ಸಮಿತಿಯ ನಿರ್ದೇಶನದಂತೆ ಆದಂ ಮದನಿ ಆತೂರು ಹಾಗೂ ಹಂಝ ಮದನಿ ಗುರುವಾಯನೆಕೆರೆ RETURNING ಆಫೀಸರಾಗಿ ಆಗಮಿಸಿ ನೂತನ  ಸಮಿತಿ ರಚನೆಗೆ ನಾಯಕತ್ವ ನೀಡಿದರು.

ಮದನೀಸ್ ಸಮಿತಿ 2021-24ನೇ ಸಾಲಿನ ನೂತನ ಪದಾಧಿಕಾರಿಗಳು

ಅಧ್ಯಕ್ಷರಾಗಿ ಬಿ.ಎ ಸಲೀಂ ಮದನಿ ಬೈರಿಕಟ್ಟೆ, ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಮದನಿ ಕಲ್ಲಡ್ಕ, ಅಬ್ದುಲ್ ರಹಿಮಾನ್ ಮದನಿ ತಾಳಿತ್ತನೂಜಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಅಕ್ಬರ್ ಅಲಿ ಮದನಿ ಆಲಂಪಾಡಿ, ಕಾರ್ಯದರ್ಶಿಗಳಾಗಿ ಅಲಿ ಅಸ್ಗರ್ ಮದನಿ ಒಕ್ಕೆತ್ತೂರು, ಅಬೂಬಕ್ಕರ್ ಮದನಿ ನಿರ್ಬೈಲು, ಕೋಶಾಧಿಕಾರಿಯಾಗಿ ಮುಹಮ್ಮದ್ ಮದನಿ ನಾಟೆಕ್ಕಲ್(ಅಲ್ ಮಾಸ್) ಆಯ್ಕೆಯಾದರು

ಸದಸ್ಯರುರಾಗಿ ಅಬ್ದುಲ್ ರಹಿಮಾನ್ ಮದನಿ ಮದ್ಯನಡ್ಕ, ಅಬ್ದುಲ್ ಹಮೀದ್ ಮದನಿ ಬೋಳಂತೂರು, ಇಸ್ಮಾಯಿಲ್ ಮದನಿ ಗೋಳಿಪಡ್ಪು, ಅಬೂಬಕ್ಕರ್ ಮದನಿ ಮುದುಂಗಾರುಕಟ್ಟೆ, ಮೂಸಾ ಕಲೀಂ ಮದನಿ ಮುದುಂಗಾರುಕಟ್ಟೆ, ಮುಹಿಯುದ್ದೀನ್ ಮದನಿ ಕಟ್ಟತ್ತಿಲ, ಮುಹಮ್ಮದ್ ಅಲಿ ಮದನಿ ಸೆರ್ಕಳ,  ಇಸ್ಮಾಯಿಲ್ ಬುಖಾರಿ ಮದನಿ ನೂಜಿ, ರಫೀಖ್ ಮದನಿ ಪಾಟ್ರಕೋಡಿ, ರಿಯಾಝ್ ಮದನಿ ಬಂಟ್ವಾಳ, ಝಿಯಾದ್ ಮದನಿ ಪಾಟ್ರಕೋಡಿ, ಉಮರ್ ಮದನಿ ಪರಪ್ಪು, ಅಬ್ದುಲ್ ರಹಿಮಾನ್ ಮದನಿ ಮೂಳೂರು, ಅಬ್ದುಲ್ ಹಮೀದ್ ಮದನಿ ಕುಕ್ಕಿಲ ಹಾಗೂ 34 ಮದನಿಗಳನ್ನು ಜಿಲ್ಲಾ ಕೌನ್ಸಿಲರಾಗಿ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಕೇಂದ್ರ ಮದನೀಸ್ ಉಪಾಧ್ಯಕ್ಷ ಸಾಮಣಿಗೆ ಮುಹಮ್ಮದ್ ಮದನಿ, ಮದನೀಸ್ ದ.ಕ ಜಿಲ್ಲಾ ವೆಸ್ಟ್‌ ಇದರ ಪ್ರ.ಕಾರ್ಯದರ್ಶಿ ಮುಹಮ್ಮದ್ ಮದನಿ ಪೂಡಲ್, ಕೊಳಕೆ ಮದ್ರಸ ಸದರ್ ಉಸ್ತಾದ್ ಅಬ್ದುರ್ರಝ್ಝಾಖ್ ಸಖಾಫಿ ಉಪಸ್ಥಿತರಿದ್ದರು.

ಅಕ್ಬರ್ ಅಲಿ ಮದನಿ ಆಲಂಪಾಡಿ ಸಭೆಯನ್ನು ಸ್ವಾಗತಿಸಿದರೆ, ನೂತನ ಅಧ್ಯಕ್ಷರು ಮಾತನಾಡಿ, ನೂತನ ಪ್ರ.ಕಾರ್ಯದರ್ಶಿ ದನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News