×
Ad

ಟ್ರಂಪ್ ವಿರುದ್ಧ ತಿರುಗಿಬಿದ್ದ ಉಪಾಧ್ಯಕ್ಷ ಮೈಕ್ ಪೆನ್ಸ್

Update: 2021-01-07 10:09 IST

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಕಳೆದ ಎರಡು ತಿಂಗಳಿಂದ ಆಧಾರ ರಹಿತ ಆರೋಪ ಮಾಡುತ್ತಾ ಬಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇದೀಗ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರೇ ತಿರುಗಿ ಬಿದ್ದಿದ್ದು, ಟ್ರಂಪ್‌ಗೆ ಭಾರಿ ಹಿನ್ನಡೆಯಾಗಿದೆ.

ಜನವರಿ 20ರಂದು ಜೋ ಬೈಡನ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಎಲೆಕ್ಟೊರಲ್ ಮತಗಳನ್ನು ಧಿಕ್ಕರಿಸುವ ಏಕಪಕ್ಷೀಯ ಸಾಮರ್ಥ್ಯ ತಮಗಿಲ್ಲ ಎಂದು ಪೆನ್ಸ್ ಹೇಳಿದ್ದಾರೆ. ಎಲೆಕ್ಟೊರಲ್ ಮತಗಳ ಎಣಿಕೆಗಾಗಿ, ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿದ್ದ ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನಕ್ಕೆ ಮುನ್ನ ಪೆನ್ಸ್ ಈ ಹೇಳಿಕೆ ನೀಡಿದ್ದಾರೆ.

"ನನ್ನ ಪ್ರತಿಜ್ಞೆ ಸಂವಿಧಾನವನ್ನು ಬೆಂಬಲಿಸುವುದು ಮತ್ತು ಸಮರ್ಥಿಸುವುದು ನನ್ನ ತೀರ್ಮಾನ, ಯಾವ ಎಲೆಕ್ಟೊರಲ್ ಮತಗಳನ್ನು ಎಣಿಕೆ ಮಾಡಬೇಕು ಯಾವುದನ್ನು ಎಣಿಕೆ ಮಾಡಬಾರದು ಎಂದು ನಿರ್ಧರಿಸುವ ಏಕಪಕ್ಷೀಯ ನಿರ್ಧಾರವನ್ನು ಕೈಗೊಳ್ಳದಂತೆ ತಡೆಯುತ್ತಿದೆ" ಎಂದು ಸ್ಪಷ್ಟಪಡಿಸಿದ್ದಾರೆ.

ನಿರ್ಣಾಯಕ ಕಣ ಎನಿಸಿದ್ದ ರಾಜ್ಯಗಳಲ್ಲಿ ಬೈಡನ್ ಪರವಾಗಿ ಚಲಾಯಿತವಾಗಿದ್ದ ಮತಗಳನ್ನು ಅಧಿವೇಶನದಲ್ಲಿ ಪರಿಗಣಿಸದಂತೆ ಟ್ರಂಪ್ ತಮ್ಮ ಉಪಾಧ್ಯಕ್ಷರ ಮೇಲೆ ಒತ್ತಡ ಹೇರಿದ್ದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News