ಟ್ರಂಪ್ ಅವರ ಖಾತೆಗಳನ್ನು ಬ್ಲಾಕ್ ಮಾಡಿದ ಫೇಸ್‍ಬುಕ್, ಟ್ವಿಟ್ಟರ್, ಇನ್‍ಸ್ಟಾಗ್ರಾಮ್

Update: 2021-01-07 04:55 GMT

ವಾಷಿಂಗ್ಟನ್ : ಅಮೆರಿಕದ ಸಂಸತ್ ಅಧಿವೇಶನ ನಡೆಯುತ್ತಿದ್ದ ಅವಧಿಯಲ್ಲಿ ಪರಾಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಸಂಸತ್ ಭವನ (ಕ್ಯಾಪಿಟೋಲ್) ಮೇಲೆ ದಾಳಿ ನಡೆಸಿದ ಬಳಿಕ ಇಡೀ ನಗರದಲ್ಲಿ ಉದ್ವಿಗ್ನ ವಾತಾವರಣ ನೆಲೆಸಿದ ಹಿನ್ನೆಲೆಯಲ್ಲಿ ಫೇಸ್‍ಬುಕ್, ಟ್ವಿಟ್ಟರ್, ಇನ್‍ಸ್ಟಾಗ್ರಾಮ್ ಟ್ರಂಪ್ ಅವರ ಖಾತೆಗಳನ್ನು ಬ್ಲಾಕ್ ಮಾಡಿವೆ.
ಇದು ತುರ್ತಪರಿಸ್ಥಿತಿ. ನಾವು ಅಧ್ಯಕ್ಷ ಟ್ರಂಪ್ ಅವರ ವೀಡಿಯೋವನ್ನು ತೆಗೆದು ಹಾಕುವುದು ಸೇರಿದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಫೇಸ್‍ಬುಕ್(ಸಮಗ್ರತೆ) ಉಪಾಧ್ಯಕ್ಷ ರೋಸೆನ್ ಹೇಳಿದ್ದಾರೆ.
ಟ್ರಂಪ್ ಅವರ ಸಂದೇಶಗಳು ಹಿಂಸಾಚಾರವನ್ನು ಉತ್ತೇಜಿಸುತ್ತಿವೆ ಎಂದಿರುವ ರೋಸೆನ್ ಸಾಮಾಜಿಕ ಮಾಧ್ಯಮ ಅಥವಾ ಅದರ ಇನ್‍ಸ್ಟಾಗ್ರಾಮ್ ಸೇವೆಯಲ್ಲಿ 24 ಗಂಟೆಗಳ ಕಾಲ ಪೋಸ್ಟ್ ಹಾಕುವುದನ್ನು ಫೇಸ್‍ಬುಕ್ ನಿರ್ಬಂಧಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News