ಟ್ರಂಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲು ಅವರ ಕ್ಯಾಬಿನಟ್ ಸದಸ್ಯರಿಂದಲೇ ಚರ್ಚೆ: ವರದಿ
Update: 2021-01-07 11:13 IST
ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಕ್ಯಾಪಿಟಲ್ ಗೆ(ಸಂಸತ್ ಭವನ)ನುಗ್ಗಿದ ನಂತರ ಟ್ರಂಪ್ ಅವರನ್ನು ಅಧಿಕಾರದಿಂದ ತೆಗೆದುಹಾಕುವ ಸಾಧ್ಯತೆಯ ಬಗ್ಗೆ ಡೊನಾಲ್ಡ್ ಟ್ರಂಪ್ ಅವರ ಕ್ಯಾಬಿನೆಟ್ ಸದಸ್ಯರು ಬುಧವಾರ ಚರ್ಚಿಸಿದ್ದಾರೆ ಎಂದು ಅಮೆರಿಕದ ಮೂರು ಸುದ್ದಿವಾಹಿನಿಗಳು ವರದಿ ಮಾಡಿವೆ.
ಅಮೆರಿಕ ಸಂವಿಧಾನದ 25ನೇ ತಿದ್ದುಪಡಿಯ ಮೇಲೆ ಚರ್ಚೆಯು ಕೇಂದ್ರೀಕರಿಸಿದೆ. ಈ ತಿದ್ದುಪಡಿಯು ಉಪಾಧ್ಯಕ್ಷ ಹಾಗೂ ಕ್ಯಾಬಿನೆಟ್ ಸದಸ್ಯರಿಗೆ ಅಧ್ಯಕ್ಷರು ತಮ್ಮ ಕಚೇರಿಯ ಅಧಿಕಾರ ಹಾಗೂ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಲು ಸಮರ್ಥರಾಗಿಲ್ಲ ಎಂದು ತೀರ್ಮಾನಿಸಿ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಅನುವು ಮಾಡಿಕೊಡುತ್ತದೆ.
ಉಪಾಧ್ಯಕ್ಷ ಮೈಕಲ್ ಪೆನ್ಸ್ ಅಧ್ಯಕ್ಷರನ್ನು ತೆಗೆದುಹಾಕುವ ಮತದಾನದಲ್ಲಿ ಕ್ಯಾಬಿನೆಟನ್ನು ಮುನ್ನಡೆಸಬೇಕಾಗುತ್ತದೆ.