ಅಮೆರಿಕ ಸಂಸತ್ತಿಗೆ ಮುತ್ತಿಗೆ: ಟ್ರಂಪ್ ಅವರ ಕಟ್ಟಾ ಬೆಂಬಲಿಗ ಮಹಿಳೆ ಗುಂಡೇಟಿಗೆ ಬಲಿ

Update: 2021-01-07 12:35 GMT

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಸೋಲನ್ನು ಒಪ್ಪಿಕೊಳ್ಳದ ಅವರ ಬೆಂಬಲಿಗರು ಕ್ಯಾಪಿಟಲ್ ಭವನ(ಅಮೆರಿಕದ ಸಂಸತ್ ಭವನ)ಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಘಟನೆಯಲ್ಲಿ ನಾಲ್ವರು ಗುಂಡೇಟಿಗೆ ಬಲಿಯಾಗಿದ್ದು, ಇದರಲ್ಲಿ ಡೊನಾಲ್ಡ್ ಟ್ರಂಪ್ ಅವರ ಕಟ್ಟಾ ಬೆಂಬಲಿಗ ಮಹಿಳೆಯೊಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಗುಂಡೇಟು ಬೀಳುವುದಕ್ಕೂ ಮೊದಲು ಮಂಗಳವಾರ ಟ್ವೀಟಿಸಿದ್ದ ಟ್ರಂಪ್ ಬೆಂಬಲಿಗ ಮಹಿಳೆ, "ನಮ್ಮನ್ನು ಯಾರಿಂದಲೂ ತಡೆಯಲಾಗದು… ಅವರು ಪದೇ ಪದೇ ಪ್ರಯತ್ನಿಸಬಹುದು. ಆದರೆ ಚಂಡಮಾರುತವು ಇಲ್ಲಿದೆ. ಅದು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ವಾಷಿಂಗ್ಟನ್ ಡಿಸಿ ಮೇಲೆ ಅಪ್ಪಳಿಸಲಿದೆ…ಡಾರ್ಕ್ ಟು ಲೈಟ್! ಎಂದು ಬರೆದಿದ್ದಾರೆ.

ಅಮೆರಿಕದ ಏರ್ ಫೋರ್ಸ್ ನಲ್ಲಿ 14 ವರ್ಷ ಪೂರೈಸಿರುವ ಹಿರಿಯ ಅಧಿಕಾರಿ ಅಶ್ಲಿ ಜಬ್ಬಿಟ್ ಗುಂಡೇಟಿಗೆ ಬಲಿಯಾದ ಮಹಿಳೆಯಾಗಿದ್ದಾರೆ ಸ್ಟ್ಯಾನ್ ಡಿಯಾಗೊ ಟಿವಿ ವರದಿ ಮಾಡಿದೆ. ಈ ಮಹಿಳೆ ಸ್ಟ್ಯಾನ್ ಡಿಯಾಗೊ ಮೂಲದವಳಾಗಿದ್ದು ಟ್ರಂಪ್ ಅವರ ಕಟ್ಟಾ ಬೆಂಬಲಿಗಳು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆಯ ಸಾವನ್ನು ಖಚಿತಪಡಿಸಿರುವ ವಾಷಿಂಗ್ಟನ್ ಪೊಲೀಸರು ಸತ್ತವರ ಗುರುತು ಪತ್ತೆ ಅಥವಾ ಶೂಟಿಂಗ್ ಸಂದರ್ಭಗಳ ವಿವರಗಳನ್ನು ನೀಡಿಲ್ಲ. ಸದ್ಯ ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News