ಓದುಗರಿಂದ ಲೇಖನಿಗೆ ಯಶಸ್ಸು: ಡಾ.ಪ್ರದೀಪ್ ಕುಮಾರ್

Update: 2021-01-07 14:25 GMT

ಹೆಬ್ರಿ, ಜ.7: ಯಾವುದೇ ಒಂದು ಲೇಖಕ ಯಶಸ್ಸನ್ನು ಪಡೆಯಬೇಕಾದರೆ ಓದುಗರು ಮುಖ್ಯ ಎಂದು ಹಿರಿಯ ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಹೇಳಿದ್ದಾರೆ.

ಅವರು ಜ.2ರಂದು ಹೆಬ್ರಿ ಅನಂತಪದ್ಮನಾಭ ದೇವಸ್ಥಾನದಲ್ಲಿ ಅವರ 410ನೆ ಕೃತಿ 4 ಸಂಪುಟ ಮತ್ತು 1800 ಪುಟಗಳ ‘ಜಯಭಾರತ’ ಮಹಾಕಾವ್ಯವನ್ನು ದೇವಾರ್ಪಣೆ ನರವೇರಿಸಿ ಬಳಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಸುಮಾರು 31 ವರ್ಷದ ಸಾಹಿತ್ಯದ ನಡಿಗೆಯಲ್ಲಿ 410 ಕೃತಿಗಳು ಬಿಡುಗಡೆ ಯಾಗಿದೆ. ಅವುಗಳಲ್ಲಿ 13 ಮಹಾಕಾವ್ಯಗಳ ಪೈಕಿ 5ಸಾವಿರ ಪುಟಗಳ ಯುಗಾ ವತಾರಿ ಮಹಾಕಾವ್ಯ ಭಾರತೀಯ ಭಾಷೆಗಳಲ್ಲಿ ಅತಿ ದೊಡ್ಡ ಕಾವ್ಯವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಮುಂದಿನ ವರ್ಷ ಭಗವದ್ಗೀತೆಯ ಬಗ್ಗೆ ಮಹಾಕಾವ್ಯ ಚನೆಯಾಗಲಿದೆ ಎಂದರು.

ಹೆಬ್ರಿ ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಯೋಗೀಶ್ ಭಟ್ ಮಾತನಾ ಡಿದರು. ಈ ಸಂದರ್ಭದಲ್ಲಿ ಮಂಡ್ಯ ಪ್ರೆಸ್‌ನ ಶಿವಪ್ರಕಾಶ್, ಬಾಲಕೃಷ್ಣ ಮಲ್ಯ, ಭಾಸ್ಕರ್ ಜೋಯಿಸ್, ವೆಂಕಟೇಶ್ ನಾಯಕ್, ರಾಮಕೃಷ್ಣ ಆಚಾರ್ಯ, ಸೀತಾನದಿ ವಿಠಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News