ಶಿರ್ವ: ತ್ರಿಜಿಲ್ಲಾ ಮಟ್ಟದ 18 ವರ್ಷದೊಳಗಿನವರ ಕ್ರಿಕೆಟ್ ಪಂದ್ಯಾಟ

Update: 2021-01-07 14:41 GMT

ಶಿರ್ವ ಜ.7: ಇಲ್ಲಿನ ಹಿಂದೂ ಜ್ಯೂನಿಯರ್ ಕಾಲೇಜು ಕ್ರಿಕೆಟ್ ಅಕಾಡೆಮಿ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಸಹಕಾರದೊಂದಿಗೆ ಆಯೋಜಿಸಿದ್ದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲಾ ಮಟ್ಟದ 18 ವರ್ಷ ಕೆಳಹರೆಯದವರ ಕ್ರಿಕೆಟ್ ಪಂದ್ಯಾಟದ ಅಂತಿಮ ಪಂದ್ಯದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯನ್ನು 82 ರನ್‌ಗಳ ಅಂತರದಿಂದ ಸೋಲಿಸಿದ ಮಂಗಳೂರಿನ ಝ್ಯೂಸ್ ಕ್ರಿಕೆಟರ್ಸ್‌ ತಂಡ, ಪ್ರಶಸ್ತಿ ಮತ್ತು ನಗದು ಬಹುಮಾನವನ್ನು ಗೆದ್ದುಕೊಂಡಿತು.

ಅಂತಿಮ ಪಂದ್ಯದಲ್ಲಿ ಝ್ಯೂಸ್ ಕ್ರಿಕೆಟರ್ಸ್‌ ಪ್ರಥಮೇಶ್ (45), ಹಾನೋಕ್ (23) ಇವರ ಬ್ಯಾಟಿಂಗ್ ನೆರವಿನಿಂದ ನಿಗದಿತ 25 ಓವರುಗಳಲ್ಲಿ 8 ವಿಕೆಟ್‌ಗೆ 177 ರನ್ ಗಳಿಸಿತಲ್ಲದೇ, ಬಳಿಕ ಎದುರಾಳಿ ತಂಡವನ್ನು 95 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 82 ರನ್‌ಗಳ ಅಂತರದ ಜಯ ದಾಖಲಿಸಿತು.

ಅಂತಿಮ ಪಂದ್ಯದಲ್ಲಿ ನತಾನ್ ಡಿ ಮೆಲ್ಲೊ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪಡೆದರು. ಉಡುಪಿ ತಂಡದ ಋಷಬ್ ನಾಯಕ್ ಉತ್ತಮ ಬ್ಯಾಟ್ಸ್‌ಮನ್, ಝ್ಯೂಸ್ ತಂಡದ ಅರೆನ್ ಉತ್ತಮ ಬೌಲರ್, ಕರಾವಳಿ ಮಂಗಳೂರಿನ ಹರ್ಷಿತ್ ಶೆಟ್ಟಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದುಕೊಂಡರು.

ಸೆಮಿಫೈನಲ್ ಪಂದ್ಯದಲ್ಲಿ ಝ್ಯೂಸ್ ತಂಡ, ಕರಾವಳಿ ತಂಡವನ್ನು 4 ವಿಕೆಟ್‌ಗಳ ಅಂತರದಿಂದ ಸೋಲಿಸಿ ಫೈನಲ್‌ಗೇರಿತ್ತು. ಕರಾವಳಿ ಕಾವಲು ಪಡೆಯ ಅರಕ್ಷಕ ಅಧೀಕ್ಷಕ ಚೇತನ್ ವಿಜೇತರಿಗೆ ಬಹುಮಾನ ವಿತರಿಸಿದರು.

ಶಾಮ್ಸ್ ಸ್ಕ್ವಾಯರ್ ಸಂಸ್ಥೆಯ ಸುಧೀರ್ ಶೆಟ್ಟಿ ಅಟ್ಟಿಂಜ, ಮಾಜಿ ಪ್ರಾಂಶುಪಾಲ ರಾಜ್‌ಗೋಪಾಲ್ ಕೆ., ವಿದ್ಯಾವರ್ದಕ ಸಂಘದ ಕರೆಸ್ಪಾಂಡೆನ್ಸ್ ಸುಬ್ಬಯ್ಯ ಹೆಗ್ಡೆ, ಆಡಳಿತಾಧಿಕಾರಿ ಭಾಸ್ಕರ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಪ್ರಸಾದ್ ಶೆಟ್ಟಿ ಕುತ್ಯಾರ್, ಉದ್ಯಮಿ ಕರುಣಾಕರ್ ಶೆಟ್ಟಿ ಸೂಡ ಉಪಸ್ಥಿತರಿದ್ದರು.

ಎಚ್‌ಜೆಸಿ ಅಕಾಡಮಿ ಮುಖ್ಯಸ್ಥ ಸದಾನಂದ ಸ್ವಾಗತಿಸಿ ಕೊನೆಯಲ್ಲಿ ವಂದಿಸಿ ದರು. ಪ್ರಸಾದ್ ಶೆಟ್ಟಿ ಮತ್ತು ಅರವಿಂದ ವುಣಿಪಾಲ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News