×
Ad

ಉಡುಪಿ: 6ನೇ ದಿನ ಪಿಯುಸಿ ಶೇ.75.67, ಎಸೆಸೆಲ್ಸಿ ಶೇ.80.3 ಹಾಜರಾತಿ

Update: 2021-01-07 20:24 IST

ಉಡುಪಿ, ಜ.7: ಗುರುವಾರ ಉಡುಪಿ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಯಲ್ಲಿ ಶೇ.75.67ರಷ್ಟು ಹಾಗೂ ಎಸೆಸೆಲ್ಸಿಯಲ್ಲಿ ಶೇ.80.3ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆ. ವಿದ್ಯಾಗಮದಲ್ಲಿ 7ನೇ ತರಗತಿಯ ಶೇ.63.6 ಹಾಗೂ 8ನೇ ತರಗತಿಯ ಶೇ.63.3ರಷ್ಟು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದಾರೆ ಎಂದು ಜಿಲ್ಲಾ ವಿದ್ಯಾಂಗ ಇಲಾಖೆಗಳು ನೀಡಿದ ಮಾಹಿತಿಗಳು ತಿಳಿಸಿವೆ.

ದ್ವಿತೀಯ ಪಿಯುಸಿಯ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಒಟ್ಟು 14818 ವಿದ್ಯಾರ್ಥಿಗಳಿದ್ದು, ಇವರಲ್ಲಿ 11,214 ಮಂದಿ (ಶೇ.75.67) ಇಂದು ತರಗತಿಗೆ ಹಾಜರಾಗಿದ್ದಾರೆ. 7262 ಬಾಲಕರ ಪೈಕಿ 5220 ಮಂದಿ (ಶೇ.71.88) ಹಾಗೂ 7530 ಬಾಲಕಿಯರ ಪೈಕಿ 5996 (ಶೇ.79.62) ಮಂದಿ ಇಂದು ತರಗತಿಯಲ್ಲಿ ಪಾಠ ಕೇಳಿದ್ದಾರೆ.

ಸರಕಾರಿ ಪಿಯು ಕಾಲೇಜುಗಳ 4987 ವಿದ್ಯಾರ್ಥಿಗಳ ಪೈಕಿ 4030 ಮಂದಿ (ಶೇ.80.81), ಅನುದಾನಿತ ಶಾಲೆಗಳ 3659 ವಿದ್ಯಾರ್ಥಿಗಳ ಪೈಕಿ 2883 ಮಂದಿ (ಶೇ.78.79) ಹಾಗೂ ಅನುದಾನ ರಹಿತ ಶಾಲೆಗಳ 6172 ವಿದ್ಯಾರ್ಥಿಗಳ ಪೈಕಿ 4301 ಮಂದಿ (ಶೇ.69.68) ಗುರುವಾರದ ತರಗತಿಗಳಿಗೆ ಹಾಜರಾಗಿದ್ದಾರೆ.

ಕಲಾ ವಿಭಾಗದಲ್ಲಿ ಕಲಿಯುತ್ತಿರುವ 1599 ವಿದ್ಯಾರ್ಥಿಗಳಲ್ಲಿ 1212 ಮಂದಿ (ಶೇ.75.79), ವಾಣಿಜ್ಯ ವಿಭಾಗದ 7851 ವಿದ್ಯಾರ್ಥಿಗಳ ಪೈಕಿ 6053 (ಶೇ.77.09) ಹಾಗೂ ವಿಜ್ಞಾನ ವಿಭಾಗದ 5354 ವಿದ್ಯಾರ್ಥಿಗಳ ಪೈಕಿ 3923 ಮಂದಿ (ಶೇ.73.27) ಇಂದು ಪಾಠ ಕೇಳಿದ್ದಾರೆ.

ಎಸೆಸೆಲ್ಸಿ ಶೇ.85: ಎಸೆಸೆಲ್ಸಿಯಲ್ಲಿ ಜಿಲ್ಲೆಯ ಐದು ವಲಯಗಳಲ್ಲಿ ಒಟ್ಟಾರೆಯಾಗಿ ಶೇ.80.3ರಷ್ಟು ಮಂದಿ ಗುರುವಾರ ತರಗತಿಗಳಿಗೆ ಖುದ್ದಾಗಿ ಹಾಜರಾಗಿದ್ದಾರೆ. ಇವರಲ್ಲಿ ಸರಕಾರಿ ಶಾಲೆಗಳ ಶೇ.82 ಮಂದಿ, ಅನುದಾನಿತ ಶಾಲೆಗಳ ಶೇ.80 ಹಾಗೂ ಅನುದಾನ ರಹಿತ ಶಾಲೆಗಳ ಶೇ.79ರಷ್ಟು ಮಂದಿ ಮಕ್ಕಳು ಸೇರಿದ್ದಾರೆ ಎಂದು ಸಾರ್ವಜನಿ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

ಎಸೆಸೆಲ್ಸಿಯಲ್ಲಿ ಜಿಲ್ಲೆಯ ಐದು ವಲಯಗಳಲ್ಲಿ ಒಟ್ಟಾರೆಯಾಗಿ ಶೇ.80.3ರಷ್ಟು ಮಂದಿ ಗುರುವಾರ ತರಗತಿಗಳಿಗೆ ಖುದ್ದಾಗಿ ಹಾಜರಾಗಿದ್ದಾರೆ. ಇವರಲ್ಲಿ ಸರಕಾರಿ ಶಾಲೆಗಳ ಶೇ.82 ಮಂದಿ, ಅನುದಾನಿತ ಶಾಲೆಗಳ ಶೇ.80 ಹಾಗೂ ಅನುದಾನ ರಹಿತ ಶಾಲೆಗಳ ಶೇ.79ರಷ್ಟು ಮಂದಿ ಮಕ್ಕಳು ಸೇರಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ. ಸರಕಾರಿ ಶಾಲೆಗಳ 6026 ವಿದ್ಯಾರ್ಥಿಗಳ ಪೈಕಿ 4937 ಮಂದಿ, ಅನುದಾನಿತ ಶಾಲೆಗಳ 3166 ವಿದ್ಯಾರ್ಥಿಗಳ ಪೈಕಿ 2545 ಮಂದಿ ಹಾಗೂ ಅನುದಾನ ರಹಿತ ಶಾಲೆಗಳ 5899 ವಿದ್ಯಾರ್ಥಿಗಳ ಪೈಕಿ 4653 ಮಂದಿ ಇಂದು ತರಗತಿಗಳಿಗೆ ಹಾಜರಾಗಿದ್ದರು.

ವಿದ್ಯಾಗಮ ತರಗತಿ: 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂದು ನಡೆದ ವಿದ್ಯಾಗಮ ತರಗತಿಗಳಿಗೆ ಕ್ರಮವಾಗಿ ಶೇ.63.66 ಹಾಗೂ ಶೇ.63.3 ರಷ್ಟು ವಿದ್ಯಾರ್ಥಿಗಳು ಪಾಠ ಆಲಿಸಲು ಹಾಜರಾಗಿದ್ದರು.

ಏಳನೇ ತರಗತಿಗೆ ಸರಕಾರಿ ಶಾಲೆಗಳಲ್ಲಿ ಶೇ.79ರಷ್ಟು, ಅನುದಾನಿತ ಶಾಲೆಗಳಲ್ಲಿ ಶೇ.68 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಶೇ.44ರಷ್ಟು ಬಾಲಕ-ಬಾಲಕಿಯರು ಹಾಜರಾಗಿದ್ದರೆ, ಎಂಟನೇ ತರಗತಿಗೆ ಸರಕಾರಿ ಶಾಲೆಗಳಲ್ಲಿ ಶೇ.77, ಅನುದಾನಿತ ಶಾಲೆಗಳಲ್ಲಿ ಶೇ.70 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಶೇ.43ರಷ್ಟು ವಿದ್ಯಾರ್ಥಿಗಳು ಪಾಠ ಕಲಿಯಲು ಆಗಮಿಸಿದ್ದರು ಎಂದು ಮಾಹಿತಿ ತಿಳಿಸಿದೆ.

ಮೂವರು ಶಿಕ್ಷಕರಿಗೆ ಪಾಸಿಟಿವ್ 

ಶಾಲೆಗಳ ಪುನರಾರಂಭಕ್ಕೆ ಮೊದಲು (ಡಿ.31ಕ್ಕೆ) ಜಿಲ್ಲೆಯ ಶಿಕ್ಷಕರು ಹಾಗೂ ಸ್ಟಾಫ್‌ಗಳಿಗೆ ನಡೆಸಿದ ಕೋವಿಡ್ ಆರ್‌ಟಿ-ಪಿಸಿಆರ್ ಪರೀಕ್ಷೆಗಳಲ್ಲಿ ಮೂವರು ಶಿಕ್ಷಕರು ಹಾಗೂ ಒಬ್ಬ ಶಾಲಾ ಸಿಬ್ಬಂದಿ ಪಾಸಿಟಿವ್ ಬಂದಿದ್ದಾರೆ ಎಂದು ಗೊತ್ತಾಗಿದೆ. ಇವರ್ಯಾರು ಸಹ ಶಾಲೆಗಳಿಗೆ ಹಾಜರಾ ಗುತ್ತಿಲ್ಲ ಎಂದು ಇಲಾಖೆ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

ಬ್ರಹ್ಮಾವರ, ಕುಂದಾಪುರ ಹಾಗೂ ಕಾರ್ಕಳ ವಲಯಗಳ ಶಿಕ್ಷಕರು ಮತ್ತು ಹೆಬ್ರಿ ವಲಯದ ಶಾಲಾ ಸಿಬ್ಬಂದಿ ಕೋವಿಡ್‌ಗೆ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News