​ಅಕ್ರಮ ಗಾಂಜಾ ಮಾರಾಟ: ಓರ್ವನ ಸೆರೆ

Update: 2021-01-07 14:56 GMT

ಉಡುಪಿ, ಜ.7: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ನನ್ನು ಶಿರ್ವ ಪೊಲೀಸರು ಜ.6ರಂದು ಶಿರ್ವ ಸೈಂಟ್ ಮೇರಿಸ್ ಸರ್ಕಲ್ ಬಳಿ ಬಂಧಿಸಿದ್ದಾರೆ.

ಒರಿಸ್ಸಾ ಮೂಲದ ಉಡುಪಿ ಬಡಾನಿಡಿಯೂರು ಗ್ರಾಮ ಕದಿಕೆ ನಿವಾಸಿ ಸಾಗರ್(22) ಬಂಧಿತ ಆರೋಪಿ. ಈತನಿಂದ 32,000ರೂ. ಮೌಲ್ಯದ 22 ಪ್ಲಾಸ್ಟಿಕ್ ತೊಟ್ಟೆಗಳಲ್ಲಿದ್ದ ಒಟ್ಟು 1.100 ಕೆ.ಜಿ. ಗಾಂಜಾ, 7 ಖಾಲಿ ಪ್ಲಾಸ್ಟಿಕ್ ತೊಟ್ಟೆಗಳು, 1,200 ರೂ. ನಗದು, ಗಾಂಜಾ ತುಂಬಿಸಿದ ಬ್ಯಾಗ್, ದ್ವಿಚಕ್ರ ವಾಹನ ಮತ್ತು ಮೊಬೈಲ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News