ಮಂಗಳೂರು ಕಡಲತೀರಗಳಿಗೆ ಪೊಲೀಸ್ ದಾಳಿ : ಅಕ್ರಮ ಚಟುವಟಿಕೆ ಬಗ್ಗೆ ತೀವ್ರ ತಪಾಸಣೆ
ಮಂಗಳೂರು, ಜ.7: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಬೀಚ್‌ಗಳಿಗೆ ಗುರುವಾರ ಸಂಜೆ ಏಕಕಾಲಕ್ಕೆ ಹಠಾತ್ ದಾಳಿ ನಡೆಸಿದ ಮಂಗಳೂರು ನಗರ ಪೊಲೀಸರು, ಅಕ್ರಮ ಚಟುವಟಿಕೆಯ ಬಗ್ಗೆ ತಪಾಸಣೆ ನಡೆಸಿದರು.
ನಗರದ ತಣ್ಣೀರುಬಾವಿ, ಪಣಂಬೂರು, ಸೋಮೇಶ್ವರ, ಸುರತ್ಕಲ್ ಬೀಚ್‌ಗಳಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿ ಕುಮಾರ್ ನೇತೃತ್ವದ ನಗರ ಪೊಲೀಸರ ತಂಡ ಏಕಕಾಲಕ್ಕೆ ಲಗ್ಗೆಯಿಟ್ಟು ತಪಾಸಣೆ ನಡೆಸಿತು.
ಬೀಚ್‌ನಲ್ಲಿ ಅನಾಮಿಕರ ಸುತ್ತಾಟ, ಗಾಂಜಾ ಮತ್ತು ಡ್ರಗ್ಸ್ ಸೇರಿದಂತೆ ನಿಷೇಧಿತ ವಸ್ತುಗಳ ಸೇವನೆ, ಮದ್ಯಪಾನ ಮಾಡುವವರು ಸೇರಿದಂತೆ ನಾನಾ ರೀತಿಯಲ್ಲಿ ಪೊಲೀಸರು ತಪಾಸಣೆ ನಡೆಸಿದರು. ಕಾರ್ಯಾಚರಣೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಮಂಗಳೂರು ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ಹರಿರಾಮ್ ಶಂಕರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್, ಎಸಿಪಿಗಳಾದ ಜಗದೀಶ್, ಬೆಳ್ಳಿಯಪ್ಪ ಸೇರಿದಂತೆ ಆಯಾ ಠಾಣಾ ಇನ್‌ಸ್ಪೆಕ್ಟರ್‌ಗಳು, ಸಿಬ್ಬಂದಿ ಉಪಸ್ಥಿತರಿದ್ದರು.