ದ.ಕ. ಜಿಲ್ಲೆ : ಪಿಯು ತರಗತಿ ಹಾಜರಾತಿ ಇಳಿಕೆ

Update: 2021-01-07 17:07 GMT

ಮಂಗಳೂರು, ಜ.7: ದ.ಕ. ಜಿಲ್ಲೆಯಲ್ಲಿ ಪದವಿ ಪೂರ್ವ ತರಗತಿಗಳ ಹಾಜರಾತಿಯು ಗುರುವಾರ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ಬುಧವಾರ ಶೇ.80.36ರಷ್ಟಿದ್ದ ವಿದ್ಯಾರ್ಥಿಗಳು, ಗುರುವಾರ ಶೇ.79.5ಕ್ಕೆ ಇಳಿಕೆಯಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ.80ರಷ್ಟು ಹಾಜರಾತಿ ದಾಖಲಾಗಿದೆ. 6ರಿಂದ 9ನೇ ತರಗತಿವರೆಗೆ ಸರಾಸರಿ ಶೇ.55ರಿಂದ 60 ಹಾಜರಾತಿಯಿದೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ ವಿಟ್ಲ ಕಾಲೇಜೊಂದರ ಪಿಯು ಉಪನ್ಯಾಸಕರೊಬ್ಬರಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ. ಅವರನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಅವರು ಪಾಠ ಮಾಡಿದ ತರಗತಿ ವಿದ್ಯಾರ್ಥಿಗಳನ್ನೂ, ಏಳು ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಸೋಂಕಿನ ಲಕ್ಷಣ ಕಂಡುಬಂದ ವಿದ್ಯಾರ್ಥಿಗಳ ಪರೀಕ್ಷೆ ನಡೆಸಲಾಗುವುದು ಎಂದು ಡಿಡಿಪಿಯು ಮುಹಮ್ಮದ್ ಇಮ್ತಿಯಾಝ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News