ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ : ಯು.ಕೆ ಕಣಚೂರು ಮೋನು

Update: 2021-01-07 17:10 GMT

ಕೊಣಾಜೆ : ಹೆತ್ತವರು  ಮಕ್ಕಳಿಗೆ ಒಂದೇ ಶಾಲೆಯಲ್ಲಿ  ಪ್ರಾಥಮಿಕ  ಹಾಗೂ ಪ್ರೌಢಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಆರಂಭಗೊಂಡ ಕಣಚೂರು ಶಿಕ್ಷಣ ಸಂಸ್ಥೆ  ಇದೀಗ ವೈದ್ಯಕೀಯ ಶಿಕ್ಷಣಕ್ಕೆ ಕಾಲಿಟ್ಟು ಐದು ವರ್ಷಗಳನ್ನು ಕಳೆದು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ  ಎಂದು ಕಣಚೂರು ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್  ಅಧ್ಯಕ್ಷ ಯು.ಕೆ ಕಣಚೂರು ಮೋನು ಅಭಿಪ್ರಾಯಪಟ್ಟರು.

ಅವರು  ನಾಟೆಕಲ್‍ನ  ಕಣಚೂರು  ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್  ಇದರ ಅಂತಿಮ ವಿಭಾಗದ  ವಿದ್ಯಾರ್ಥಿಗಳಿಗೆ  ಗುರುವಾರ  ಕಣಚೂರು ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಬೀಳ್ಕೊಡುಗೆ ಸಮಾರಂಭ  ಅಲೋಹಾ-2020  ಇದನ್ನು ಉದ್ಘಾಟಿಸಿ ಮಾತನಾಡಿದರು.

ಕಣಚೂರು ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್ ನ ನಿರ್ದೇಶಕ  ಅಬ್ದುಲ್ ರೆಹಮಾನ್ ಮಾತನಾಡಿ ` ಸಂಸ್ಥೆ ಅಧ್ಯಕ್ಷರು ಹೆತ್ತವರಿಗೆ ಶಾಲೆ ಹೊರೆಯಾಗಬಾರದೆನ್ನುವ ಉದ್ದೇಶದಿಂದ  ಪ್ರಾಥಮಿಕ  ಹಾಗೂ ಪ್ರೌಢಶಿಕ್ಷಣವನ್ನು  ಪಣತೊಟ್ಟು ಆರಂಭಿಸಿದರು.  ಇದೀಗ ಕಣಚೂರು ಸಂಸ್ಥೆ ಪ್ರಾಥಮಿಕ ಹಾಗೂ ಉನ್ನತ ವ್ಯಾಸಾಂಗದಲ್ಲೂ ದಾಪುಗಾಲು ಹಾಕಿ ಐದು ವರ್ಷಗಳು ಯಶಸ್ವಿಯಾಗಿ ಸಂದಿವೆ.  ಗುಣಮಟ್ಟದ ಶಿಕ್ಷಣ  ಪಡೆಯಲು  ಕಣಚೂರು ಸಂಸ್ಥೆ ಎಲ್ಲಾ ರೀತಿಯ ಸಹಕಾರವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ.  ಏಳುಬೀಳುಗಳ ನಡುವೆ ಬೆಳೆದು ನಿಂತ ಕಣಚೂರು ಸಮೂಹ ಶಿಕ್ಷಣ ಸಂಸ್ಥೆ  ಬೆಳೆದು ನಿಲ್ಲುವಲ್ಲಿ ಶ್ರಮ ಬಹಳಷ್ಟಿದೆ.  ನರ್ಸಿಂಗ್ ಕ್ಷೇತ್ರ ಅನ್ನುವುದು ನೋಬೆಲ್ ಕ್ಷೇತ್ರವಾಗಿದ್ದು, ಮಾನವೀಯತೆಗೆ ಕೊಡುವಂತಹ ಮಹತ್ತರ ಕಾಣಿಕೆಯಾಗಿದೆ ಎಂದರು. ಈ ಸಂದರ್ಭ ಕಣಚೂರು ಸಂಸ್ಥೆಯಲ್ಲಿ ನರ್ಸಿಂಗ್ ಪೂರೈಸಿದ 58 ಮಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಮುಖ್ಯ ಅತಿಥಿಗಳಾಗಿ ನಿರ್ದೇಶಕರು ಅಬ್ದುಲ್ ರಹ್ಮಾನ್, ಕಣಚೂರು ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್ ಪ್ರಾಂಶುಪಾಲೆ ಪ್ರೊ. ಮೋಲಿ ಸಲ್ದಾನ್ಹ ,  ಕಣಚೂರು ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್,   ಕಣಚೂರು  ವೈದ್ಯಕೀಯ ಕಾಲೇಜಿನ ಡೀನ್ ಡಾ.ಎಚ್.ಎಸ್ ವಿರೂಪಾಕ್ಷ  ಉಪಸ್ಥಿತರಿದ್ದರು.

ಕೃಷ್ಣ ಪ್ರಿಯ ಸ್ವಾಗತಿಸಿದರು. ಆಲ್ಬಿನ್ ಥಾಮಸ್ , ಸ್ನೇಹಾ ಮರಿಯಂ ಕಾರ್ಯಕ್ರಮ  ನಿರ್ವಹಿಸಿದರು. ಶ್ರಿಮಿತಾ ಫಿಲಿಪ್  ವಂದಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News