ಸೂರಲ್ಪಾಡಿ ಫ್ರೆಂಡ್, ‘ಅಲ್ ಖೈರ್’ ಟ್ರಸ್ಟ್‌ನ ಸಂಯುಕ್ತ ಸಭೆ

Update: 2021-01-07 17:56 GMT

ಮಂಗಳೂರು : ಸೂರಲ್ಪಾಡಿ ಫ್ರೆಂಡ್ಸ್ ಸೌದಿ ಅರೇಬಿಯ ಇದರ ದುಬೈ ಹಾಗೂ ಮಸ್ಕತ್ ಘಟಕ, ಅಲ್ ಖೈರ್ ಇಸ್ಲಾಮಿಕ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಸಂಯುಕ್ತ ಸಭೆಯು ಸೂರಲ್ಪಾಡಿಯ ನೂರುಲ್ ಉಲೂಂ ಮದ್ರಸ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು.

ಅಲ್ ಖೈರ್ ಅಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಅಬ್ದುಲ್ ಮಜೀದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಲ್ ಖೈರ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸೂರಲ್ಪಾಡಿ ಪರಿಸರದ ಬಡ ಮಕ್ಕಳಿಗೆ ಮಿತ ವೆಚ್ಚದಲ್ಲಿ ವಿದ್ಯಾಭ್ಯಾಸ ನೀಡಲು ತೀರ್ಮಾನಿಸಲಾಯಿತು.

ಇದೇ ವೇಳೆ ಬ್ಯಾರಿ ಅಕಾಡಮಿಯ ಗೌರವ ಪ್ರಶಸ್ತಿಗೆ ಪಾತ್ರರಾದ ಸೂರಲ್ಪಾಡಿ ಅಬ್ದುಲ್ ಮಜೀದ್, ಆಸಿಫ್ ಸೂರಲ್ಪಾಡಿ ಹಾಗೂ ಗ್ರಾಪಂ ಚುನಾವಣೆಯಲ್ಲಿ ವಿಜೇತರಾದ ಆರ್.ಎಸ್.ಝಾಕಿರ್‌ರನ್ನು ಸನ್ಮಾನಿಸಲಾಯಿತು.

ಎಸ್‌ಎಫ್‌ಎ. ಅಧ್ಯಕ್ಷ ಅನ್ವರ್ ಸಾದಾತ್, ಉಪಾಧ್ಯಕ್ಷ ಮುಹಮ್ಮದ್ ಶಮೀರ್ ಅಬ್ಬಾಸ್, ಇಲ್ಯಾಸ್(ಅಲ್ ಇದ್ರೀಸ್), ಶರೀಫ್ ಸಾದು, ಎಚ್.ಆರ್.ಫಝಲ್ ರಹ್ಮಾನ್, ಯುಎಇ ಘಟಕದ ಆಸಿಫ್, ಮಸ್ಕತ್ ಘಟಕದ ನಯಾಝ್, ರಿಯಾಝ್, ಪಿಡಬ್ಲುಡಿ ಕಾಂಟ್ರಾಕ್ಟರ್ ಎಂ.ಎಸ್.ಅಬ್ದುಲ್ ಹಮೀದ್, ಖಜಾಂಚಿ ಕೆ.ಎಚ್.ಅಲಿ ಅಬ್ಬಾಸ್, ನಿರ್ದೇಶಕರಾದ ಅಶ್ರಫ್, ಮುಸ್ತಾಕ್ ಸಾದು, ಹೆಲ್ಪಿಂಗ್ ಹ್ಯಾಂಡ್ಸ್ ಸೂರಲ್ಪಾಡಿ ಇದರ ಅಧ್ಯಕ್ಷ ಅರ್ಶದ್ ಅಹ್ಮದ್ ಬಾವ, ‘ನಂಡೆ ಪೆಂಙಳ್’ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ, ಸೂರಲ್ಪಾಡಿ ಜಮಾಅತ್ ಅಧ್ಯಕ್ಷ ಆರ್.ಎಸ್.ಮುಹಮ್ಮದ್, ಇರ್ಶಾದುಲ್ ಮುಸ್ಲಿಮೀನ್ ಅಸೋಸಿಯೇಶನ್ ಅಧ್ಯಕ್ಷ ಟಿ.ಎಸ್.ಇಸ್ಮಾಯೀಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಮುಸ್ತಾಕ್ ಸ್ವಾಗತಿಸಿದರು. ಸೂರಲ್ಪಾಡಿ ಜಮಾಅತ್ ಕಾರ್ಯದರ್ಶಿ ಶೇಖ್ ಮುಖ್ತಾರ್ ವಂದಿಸಿದರು. ಶಾಲೆಯ ಕಾರ್ಯದರ್ಶಿ ಇಬ್ರಾಹೀಂ ಸಾಗರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News