×
Ad

ಟ್ರಂಪ್‍ರನ್ನು ಫೇಸ್‍ಬುಕ್‍ನಿಂದ ಅನಿರ್ದಿಷ್ಟಾವಧಿಗೆ ನಿಷೇಧಿಸಲಾಗಿದೆ : ಮಾರ್ಕ್ ಝುಕರ್‍ಬರ್ಗ್

Update: 2021-01-08 10:49 IST

ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರನ್ನು ಅನಿರ್ದಿಷ್ಟಾವಧಿಗೆ ಫೇಸ್‍ಬುಕ್‍ನಿಂದ ನಿಷೇಧಿಸಲಾಗಿದೆ ಎಂದು ಫೇಸ್‍ಬುಕ್ ಸಿಇಒ ಮಾರ್ಕ್ ಝುಕರ್‍ಬರ್ಗ್ ತಿಳಿಸಿದ್ದಾರೆ. 
ಈ ಸಮಯದಲ್ಲಿ ನಮ್ಮ ಸೇವೆಯನ್ನು ಅಧ್ಯಕ್ಷರು ಬಳಸಿಕೊಳ್ಳುವುದಕ್ಕೆ ಅನುವು ಮಾಡಿಕೊಡುವುದು ಅಪಾಯಕಾರಿ ಎಂದು ನಾವು ನಂಬಿದ್ದೇವೆ. ಹೀಗಾಗಿ ಟ್ರಂಪ್ ಅವರ ಫೇಸ್‍ಬುಕ್ ಹಾಗೂ ಇನ್‍ಸ್ಟಾಗ್ರಾಮ್ ಖಾತೆಗಳ ಅಮಾನತನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದ್ದೇವೆ. ಅಧಿಕಾರ ಹಸ್ತಾಂತರ ಶಾಂತಿಯುತವಾಗಿ ನಡೆಯುವ ತನಕ ಮುಂದಿನ ಕನಿಷ್ಠ ಎರಡು ವಾರಗಳ ತನಕ ಅಮಾನತು ಇರಲಿದೆ ಎಂದು ಝುಕರ್‍ಬರ್ಗ್  ಹೇಳಿದ್ದಾರೆ.
ಟ್ವಿಟ್ಟರ್ ಬುಧವಾರ ಸಂಜೆ ಟ್ರಂಪ್ ಅವರ ಖಾತೆಯನ್ನು 12 ಗಂಟೆಗಳ ಕಾಲ ಅಮಾನತು ಮಾಡಿತ್ತು. ಆದರೆ ಗುರುವಾರ ಬೆಳಿಗ್ಗೆ ಅಮಾನತನ್ನು ಹಿಂಪಡೆದಿತ್ತು.  ಟ್ರಂಪ್ ಟ್ವೀಟ್ ಮಾಡುವುದನ್ನು ವೀಡಿಯೋ ಶೇರ್ ಮಾಡುವುದನ್ನು ಮತ್ತೆ ಆರಂಭಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News