ಮಾರ್ಚ್ 31ರಿಂದ ಎಲ್ಲ ಅಂತರ್ ರಾಷ್ಟ್ರೀಯ ವಿಮಾನ ಯಾನ ಪುನರಾರಂಭ: ಸೌದಿ ಅರೇಬಿಯ ಘೋಷಣೆ
ದುಬೈ: ತಾತ್ಕಾಲಿಕ ಪ್ರಯಾಣ ನಿಷೇಧವನ್ನು ಹಿಂಪಡೆದುಕೊಂಡು ಎಲ್ಲಾ ಅಂತರ್ ರಾಷ್ಟ್ರೀಯ ವಿಮಾನಯಾನಗಳನ್ನು ಪುನರಾರಂಭಿಸುವುದಾಗಿ ಸೌದಿ ಅರೇಬಿಯ ಘೋಷಿಸಿದೆ ಎಂದು ಆಂತರಿಕ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ ಸೌದಿ ಪತ್ರಿಕಾ ಸಂಸ್ಥೆ ಶುಕ್ರವಾರ ವರದಿ ಮಾಡಿದೆ.
ಮಾರ್ಚ್ 31, 2021ರಂದು ಜಾರಿಗೆ ಬರಲಿರುವ ಈ ಕ್ರಮವು ಈ ಕೆಳಗಿನ ಕ್ರಮಗಳನ್ನು ಒಳಗೊಂಡಿದೆ.
1.ನಾಗರಿಕರಿಗೆ ಸೌದಿಯಿಂದ ಹೊರಗೆ ಪ್ರಯಾಣಿಸಲು ಹಾಗೂ ಹಿಂತಿರುಗಲು ಅವಕಾಶವಿರುತ್ತದೆ.
2. ಅಂತರ್ ರಾಷ್ಟ್ರೀಯ ವಿಮಾನಗಳ ಮೇಲಿನ ತಾತ್ಕಾಲಿಕ ನಿಷೇಧವನ್ನು ತೆಗೆದುಹಾಕಲಾಗುವುದು.
3.ಎಲ್ಲ ವಾಯು, ಜಲ ಹಾಗೂ ಭೂ ಗಡಿಗಳು ಮತ್ತೆ ತೆರೆಯಲ್ಪಡುತ್ತವೆ.
ಸಂಬಂಧಪಟ್ಟ ಅಧಿಕಾರಿಗಳ ಸಮನ್ವಯದೊಂದಿಗೆ ಸೌದಿಯಲ್ಲಿ ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಅಗತ್ಯವಿರುವ ಎಲ್ಲಾ ಮುನ್ನಚ್ಚರಿಕೆ ಕ್ರಮಗಳ ಮಧ್ಯೆ ಸಂಬಂಧಪಟ್ಟ ಸಮಿತಿಯು ನಿಗದಿಪಡಿಸಿದ ಕಾರ್ಯವಿಧಾನಗಳು ಹಾಗೂ ಮುನ್ನೆಚ್ಚರಿಕೆಗಳಿಗೆ ಅನುಗುಣವಾಗಿ ಮೇಲೆ ತಿಳಿಸಲಾದ ಕ್ರಮಗಳ ಅನುಷ್ಠಾನವನ್ನು ಮಾಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.