ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ನೇಮಕ

Update: 2021-01-09 12:08 GMT

ಉಳ್ಳಾಲ: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವಾರ್ಷಿಕ ಮಹಾಸಭೆಯು ಜ.8ರಂದು ತಾಜುಲ್ ಉಲಮಾ ಸುನ್ನಿ ಸೆಂಟರ್ ಮೇಲಂಗಡಿಯಲ್ಲಿ ಸೆಕ್ಟರ್ ಅಧ್ಯಕ್ಷ ಹಂಝ ಯೂಬಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ರಾಜ್ಯ ಸಮಿತಿ ಸದಸ್ಯ, ವೆಸ್ಟ್ ಝೋನ್ ಅಧ್ಯಕ್ಷರ ಮುನೀರ್ ಅಹ್ಮದ್ ಖಾಮಿಲ್ ಸಖಾಫಿ ದುಆ ಮೂಲಕ ಚಾಲನೆ ನೀಡಿ, ಉದ್ಘಾಟನೆ ಮಾಡಿದರು. ಬಳಿಕ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಮದನಿ ರವರು ವಾರ್ಷಿಕ ವರದಿ ಮತ್ತು ಸೆಕ್ಟರ್ ಕೋಶಾಧಿಕಾರಿ ಅತೀಕ್ ಕೋಡಿ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿ, ಅಂಗೀಕರಿಸಲಾಯಿತು.

ನಂತರ ಸೆಕ್ಟರ್ ಉಸ್ತುವಾರಿಗಳಾದ ಅಲ್ತಾಫ್ ಶಾಂತಿ ಭಾಗ್, ಡಿವಿಷನ್ ಅಧ್ಯಕ್ಷ ಇರ್ಫಾನ್ ನೂರಾನಿ, ಜಿಲ್ಲಾ ನಾಯಕ ಖುಬೈಬ್ ತಂಗಲ್ ಮಾತನಾಡಿದರು. ಡಿವಿಷನ್ ಸೆಲೆಕ್ಷನ್ ಆಫೀಸರ್ ಹಮೀದ್ ತಲಪಾಡಿ ರವರು ನೂತನ ಸಮಿತಿಗಿರುವ ಜವಾಬ್ದಾರಿಗಳ ಬಗ್ಗೆ ಮಾತನಾಡಿದರು. ನಂತರ ಅಧ್ಯಕ್ಷರ ಅನುಮತಿಯೊಂದಿಗೆ ಪ್ರಸ್ತುತ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಹಸ್ಸನ್ ಜಾಬೀರ್ ಫಾಲಿಲಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಹಾಶಿರ್ ಕೋಡಿ, ಕೋಶಾಧಿಕಾರಿಯಾಗಿ ಹಾಫಿಲ್ ಮೋಹಿನುದ್ದಿನ್ ಅಂಜದಿ, ಉಪಾಧ್ಯಕ್ಷರಾಗಿ ಮುಝಮ್ಮಿಲ್ ಮದನಿ ಕೋಟೆಪುರ, ದಾವೂದ್ ಬೊಟ್ಟು, ಕಾರ್ಯದರ್ಶಿಗಳಾಗಿ ತಾಜುದ್ದೀನ್ ಹಲೆಕೋಟೆ, ಶಿಹಾಂ ಮುಕ್ಕಚ್ಚೇರಿ, ತಶ್ರೀಫ್ ಮೇಲಂಗಡಿ, ಸೈಫುಲ್ಲಾ ಸಖಾಫಿ, ಮುಆಜ್ ಮೇಲಂಗಡಿ, ಫೈಝಲ್ ಕೋಟೆಪುರ ಆಯ್ಕೆಯಾದರು ಹಾಗೂ ಇತರ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಸಭೆಯ ಮೇಲ್ವಿಚಾರಕರಾಗಿ ಡಿವಿಷನ್ ಸೆಲೆಕ್ಷನ್ ಆಫೀಸರ್ ಹಮೀದ್ ತಲಪಾಡಿ, ಪ್ರಧಾನ ಕಾರ್ಯದರ್ಶಿ ಜಾಫರ್ ಯುಎಸ್ ಆಗಮಿಸಿದ್ದರು. ಸೆಕ್ಟರ್ ಎಕ್ಸಿಕ್ಯೂಟಿವ್ ನಿಂದ ಎಸ್ ವೈಎಸ್ ಗೆ ತೆರಳುತ್ತಿರುವ ಅತೀಕ್ ಕೋಡಿರವರನ್ನು ಸನ್ಮಾನಿಸಲಾಯಿತು. ಡಿವಿಷನ್ ನಾಯಕ ಮುಝಮ್ಮಿಲ್ ಕೋಟೆಪುರ, ಶಬ್ಬೀರ್ ಪೇಟೆ ಹಾಜರಿದ್ದರು.

ಮುಝಮ್ಮಿಲ್ ಮದನಿ ರವರು ಸ್ವಾಗತಿಸಿ. ನಿರೂಪಿಸಿದರು. ಮುಹಮ್ಮದ್ ಹಾಶಿರ್ ಕೋಡಿ ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News