ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಕಾರ್ಯಕ್ರಮ
ಮಂಗಳೂರು : ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಕಾರ್ಯಕ್ರಮ ತಾಜುಲ್ ಉಲಮಾ ಸುನ್ನಿ ಸೆಂಟರ್ ಮೇಲಂಗಡಿ ಯಲ್ಲಿ ಸೆಕ್ಟರ್ ಅಧ್ಯಕ್ಷ ಹಂಝ ಯೂಬಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಸ್ತುತ ಕಾರ್ಯಕ್ರಮವನ್ನು ರಾಜ್ಯ ಸಮಿತಿ ಸದಸ್ಯರು ವೆಸ್ಟ್ ಝೋನ್ ಅಧ್ಯಕ್ಷರಾ ಮುನೀರ್ ಅಹ್ಮದ್ ಖಾಮಿಲ್ ಸಖಾಫಿ ಚಾಲನೆ ನೀಡಿ ನಂತರ ಉದ್ಘಾಟನೆ ಮಾಡಿದರು.
ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಮದನಿ ವಾರ್ಷಿಕ ವರದಿ ಮಂಡಿಸಿದರು. ಸೆಕ್ಟರ್ ಕೋಶಾಧಿಕಾರಿ ಅತೀಕ್ ಕೋಡಿ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿದರು.
ಸೆಕ್ಟರ್ ಉಸ್ತುವಾರಿಗಳಾದ ಅಲ್ತಾಫ್ ಶಾಂತಿ ಭಾಗ್, ಡಿವಿಷನ್ ಅಧ್ಯಕ್ಷ ಇರ್ಫಾನ್ ನೂರಾನಿ, ಜಿಲ್ಲಾ ನಾಯಕರಾದ ಖುಬೈಬ್ ತಂಗಳ್ ಮಾತಾಡಿದರು. ಸಭೆಯನ್ನುದ್ದೇಶಿಸಿ ಡಿವಿಷನ್ ಸೆಲೆಕ್ಷನ್ ಆಫಿಸರ್ ಹಮೀದ್ ತಲಪಾಡಿ ರವರು ನೂತನ ಸಮಿತಿ ಗಿರುವ ಜವಾಬ್ದಾರಿಗಳ ಬಗ್ಗೆ ವಿಷಯವನ್ನು ಮಂಡಿಸಿದರು. ನಂತರ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹಸ್ಸನ್ ಜಾಬೀರ್ ಫಾಲಿಲಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಹಾಶಿರ್ ಕೋಡಿ, ಕೋಶಾಧಿಕಾರಿಯಾಗಿ ಹಾಫಿಲ್ ಮೋಹಿನುದ್ದಿನ್ ಅಂಜದಿ, ಉಪಾಧ್ಯಕ್ಷರುಗಳಾಗಿ ಮುಝಮ್ಮಿಲ್ ಮದನಿ ಕೋಟೆಪುರ, ದಾವೂದ್ ಬೊಟ್ಟು, ಕಾರ್ಯದರ್ಶಿಗಳಾಗಿ ತಾಜುದ್ದೀನ್ ಹಳೆಕೋಟೆ, ಶಿಹಾಂ ಮುಕ್ಕಚ್ಚೇರಿ, ತಶ್ರೀಫ್ ಮೇಲಂಗಡಿ, ಸೈಫುಲ್ಲಾ ಸಖಾಫಿ, ಮುಆಜ್ ಮೇಲಂಗಡಿ, ಫೈಝಲ್ ಕೋಟೆ ಪುರ ಆಯ್ಕೆಯಾದರು. ಇತರ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಪ್ರಸ್ತುತ ಸಭೆಯಲ್ಲಿ ಮೇಲ್ವಿಚಾರಕರಾಗಿ ಡಿವಿಷನ್ ಸೆಲೆಕ್ಷನ್ ಆಫಿಸರ್ ಹಮೀದ್ ತಲಪಾಡಿ, ಪ್ರಧಾನ ಕಾರ್ಯದರ್ಶಿ ಜಾಫರ್ ಯುಎಸ್ ಆಗಮಿಸಿದ್ದರು. ಸೆಕ್ಟರ್ ಎಕ್ಸಿಕ್ಯೂಟಿವ್ ನಿಂದ ಎಸ್ ವೈ ಎಸ್ ಗೆ ತೆರಳುತ್ತಿರುವ ಅತೀಕ್ ಕೋಡಿ ರವರನ್ನು ಸನ್ಮಾನಿಸಲಾಯಿತು.
ಡಿವಿಷನ್ ನಾಯಕರಾದ ಮುಝಮ್ಮಿಲ್ ಕೋಟೆಪುರ, ಶಬ್ಬೀರ್ ಪೇಟೆ ಹಾಜರಿದ್ದರು. ಸಭೆಯ ಆರಂಭದಲ್ಲಿ ಮುಝಮ್ಮಿಲ್ ಮದನಿ ಸ್ವಾಗತಿಸಿ ನಿರೂಪಿಸಿದರು. ಮುಹಮ್ಮದ್ ಹಾಶಿರ್ ಕೋಡಿ ವಂದಿಸಿದರು.