ಅವಿಭಜಿತ ದ.ಕ. ಜಿಲ್ಲೆಯ ನಾಲ್ವರಿಗೆ ಹೊಸ ವರ್ಷದ ಪ್ರಶಸ್ತಿ ಪ್ರದಾನ
ಉಡುಪಿ, ಜ.9: ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಹಾಗೂ ಮಣಿಪಾಲ ಮೀಡಿಯಾ ನೆಟ್‌ವರ್ಕ್‌ಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿ ವರ್ಷ ನೀಡಲಾಗುವ ‘ಹೊಸ ವರ್ಷದ ಪ್ರಶಸ್ತಿ-2021’ಗಳನ್ನು ಈ ಬಾರಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಾಲ್ವರು ಗಣ್ಯ ಸಾಧಕರಿಗೆ ನೀಡಿ ಗೌರವಿಸ ಲಾಯಿತು.
ಬೆಂಗಳೂರಿನಲ್ಲಿರುವ ಖ್ಯಾತ ಸಾಹಿತಿ ಹಾಗೂ ಕರ್ನಾಟಕ ಮಹಿಳಾ ಬರಹಗಾರ್ತಿಯರ ಸಂಘದ ಮಾಜಿ ಅಧ್ಯಕ್ಷೆ ಉಷಾ ಪಿ. ರೈ, ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಪ್ರಸಿದ್ಧ ಕಾರ್ಡಿಯೋಲಜಿಸ್ಟ್ ಡಾ.ಕೆ.ಎಸ್.ಎಸ್.ಭಟ್, ಹಿರಿಯ ಯಕ್ಷಗಾನ ಕಲಾವಿದ ಕುಮಟಾದ ಬಳ್ಕೂರು ಕೃಷ್ಣ ಯಾಜಿ ಹಾಗೂ ಮಾಜಿ ಸಚಿವ ಮೂಡಬಿದ್ರೆಯ ಕೆ.ಅಭಯಚಂದ್ರ ಜೈನ್ ಅವರಿಗೆ ಶನಿವಾರ ನಡೆದ ಸಮಾರಂಭದಲ್ಲಿ ಹೊಸವರ್ಷದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಉತ್ತರಿಸಿದ ಬಳ್ಕೂರು ಕೃಷ್ಣ ಯಾಜಿ, ಯಕ್ಷಗಾನ ಎಂಬುದು ನಮ್ಮ ರಾಜ್ಯದ ಸಾಂಸ್ಕೃತಿಕ ಹೆಗ್ಗುರುತಾಗಿದೆ. ಯಕ್ಷಗಾನ ಕೇವಲ ಮನೋರಂಜನೆಗೆ ಮಾತ್ರವಲ್ಲ. ಇದು ಜನರು ಮಾನಸಿಕವಾಗಿ ಪ್ರಬುದ್ಧತೆ ಪಡೆಯಲೂ ಕಾರಣ ವಾಗಿದೆ ಎಂದು ಅಭಿಪ್ರಾಯಪಟ್ಟರೆ, ಉಷಾ ಪಿ.ರೈ ಮಾತನಾಡಿ, 1973ರಲ್ಲಿ ತನ್ನ ತಂದೆ ಕೆ.ಹೊನ್ನಯ್ಯ ಶೆಟ್ಟಿ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿದ್ದು, ಇದೀಗ 48 ವರ್ಷಗಳ ಬಳಿಕ ತನಗೂ ಪ್ರಶಸ್ತಿ ಒಲಿದು ಬಂದಿದೆ ಎಂದರು.

ಡಾ.ಕೆ.ಎಸ್.ಎಸ್.ಭಟ್ ಅವರು ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ಕೊರೋನ ಸಾಂಕ್ರಾಮಿಕ ಕಳೆದೊಂದು ವರ್ಷದಲ್ಲಿ ಜನರ ಬದುಕಿ ನಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. ಇದರಿಂದ ನಾವು ಪಾಠವನ್ನು ಕಲಿತು, ಭವಿಷ್ಯದ ದೃಷ್ಟಿಯಿಂದ ಜೀವನ ಶೈಲಿ ಯನ್ನು ಬದಲಿಸಿಕೊಳ್ಳಬೇಕು ಎಂದರು. ಅಭಯಚಂದ್ರ ಜೈನ್ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಮಣಿಪಾಲ ಮಾಹೆಯ ಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್ ಅಭಿನಂದನಾ ಭಾಷಣ ಮಾಡಿದರು. ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಪೈ, ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ನ ರಿಜಿಸ್ಟ್ರಾರ್ ಡಾ.ರಂಜನ್ ಪೈ, ಮಣಿಪಾಲ ಮೀಡಿಯಾ ನೆಟ್‌ವರ್ಕ್‌ನ ಸತೀಶ್ ಎಂ.ಪೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ನ ಅಧ್ಯಕ್ಷ ಹಾಗೂ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಸ್ವಾಗತಿಸಿದರು.