ಉಡುಪಿ: ಶನಿವಾರ ಪಿಯುಸಿಯ ಶೇ.77.75 ವಿದ್ಯಾರ್ಥಿಗಳ ಹಾಜರಾತಿ
Update: 2021-01-09 20:16 IST
ಉಡುಪಿ, ಜ.9: ಜಿಲ್ಲೆಯಲ್ಲಿ ಶನಿವಾರ ದ್ವಿತೀಯ ಪಿಯುಸಿಯಲ್ಲಿ ಶೇ. 77.75 ಮಂದಿ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ.
ದ್ವಿತೀಯ ಪಿಯುಸಿಯ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಒಟ್ಟು 14806 ವಿದ್ಯಾರ್ಥಿಗಳಿದ್ದು, ಇವರಲ್ಲಿ 11,513 ಮಂದಿ (ಶೇ.77.75) ಇಂದು ತರಗತಿಗೆ ಹಾಜರಾಗಿದ್ದಾರೆ. 7267 ಬಾಲಕರ ಪೈಕಿ 5289 ಮಂದಿ (ಶೇ.72.78) ಹಾಗೂ 7539 ಬಾಲಕಿಯರ ಪೈಕಿ 6227 (ಶೇ.82.59) ಮಂದಿ ಇಂದು ತರಗತಿಯಲ್ಲಿ ಪಾಠ ಕೇಳಿದ್ದಾರೆ.
ಎಸೆಸೆಲ್ಸಿ ಹಾಗೂ ವಿದ್ಯಾಗಮದ ವಿದ್ಯಾರ್ಥಿಗಳೂ ಇಂದು ತರಗತಿಗಳಿಗೆ ಹಾಜರಾಗಿದ್ದರೂ ಸದ್ಯಕ್ಕೆ ಇಲಾಖೆಯಿಂದ ಮಾಹಿತಿ ಲಭ್ಯವಾಗಿಲ್ಲ.