ಜ.10: ಮೆಟ್ರೊ ಫರ್ನಿಚರ್ ವರ್ಲ್ಡ್ ಶುಭಾರಂಭ

Update: 2021-01-09 15:12 GMT

ಮಂಗಳೂರು, ಜ.9: ರಾಷ್ಟ್ರೀಯ ಹೆದ್ದಾರಿ 66ರ ಉಡುಪಿಯ ಉಚ್ಚಿಲದಲ್ಲಿ ಬಾವ ಮೆಟ್ರೊ ಫರ್ನಿಚರ್ ವರ್ಲ್ಡ್ ಶೋರೂಂ ಜ.10ರಂದು ಬೆಳಗ್ಗೆ 10:30ಕ್ಕೆ ಶುಭಾರಂಭಗೊಳ್ಳಲಿದೆ.

ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಆಗಮಿಸಲಿರುವ ಕಾಪು ಶಾಸಕ ಲಾಲಾಜಿ ಮೆಂಡನ್ ಶೋರೂಂ ಉದ್ಘಾಟಿಸಲಿದ್ದಾರೆ. ಡ್ಯುರೋಫ್ಲೆಕ್ಸ್ ಶೋರೂಂನ್ನು ಮಾಜಿ ಸಚಿವ ವಿನಯಕುಮಾರ್ ಸೊರಕೆ ಲೋಕಾರ್ಪಣೆಗೊಳಿಸಲಿದ್ದಾರೆ.

ಗೌರವ ಅತಿಥಿಗಳಾಗಿ ಕಾಪು ತಾಪಂ ಉಪಾಧ್ಯಕ್ಷ ಯು.ಸಿ. ಶೇಕಬ್ಬ, ನಿವೃತ್ತ ಕಸ್ಟಮ್ಸ್ ಅಸಿಸ್ಟಂಟ್ ರೋಹಿತ್ ಹೆಗ್ಡೆ, ಬಾವ ಎಜುಕೇಶನ್ ಟ್ರಸ್ಟ್‌ನ ಚೇರ್‌ಮನ್ ಕೆ.ಅಬ್ದುಲ್ಲಾ, ಯೆರ್ಮಾಳ್ ಜಾಮಿಯ ಮಸ್ದೀದ್‌ನ ಖತೀಬ್ ಮುಹಮ್ಮದ್ ಶಬ್ಬೀರ್ ಫೈಝಿ, ಧರ್ಮಗುರು ರೆ.ಫಾ. ರೊನಾಲ್ಡ್ ಮಿರಂಡ, ಕುಂಬಳ ಸೈಯದ್ ಕೆ.ಎಸ್., ಉದ್ಯಮಿ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಜೀವನ್ ಶೆಟ್ಟಿ, ಉದ್ಯಮಿ ಉಮೇಶ್ ಪುತ್ರನ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಸ್ಥೆಯು ಈಗಾಗಲೇ ತಲಪಾಡಿ, ಪಯ್ಯನ್ನೂರು, ಕನ್ಹಂಗಾಡ್‌ನಲ್ಲಿ ತನ್ನ ಶಾಖೆಗಳನ್ನು ತೆರೆದಿದ್ದು, ಉಚ್ಚಿಲದಲ್ಲಿ ಹೊಸದಾಗಿ ಐದನೇ ಶಾಖೆಯನ್ನು ಆರಂಭಿಸುತ್ತಿದೆ. ಬಾವ ಮೆಟ್ರೊ ಫರ್ನಿಚರ್ ವರ್ಲ್ಡ್ ಶೋರೂಂನಲ್ಲಿ ಅದ್ಭುತ ಶಾಪಿಂಗ್ ಮಾಡಿದ ಅನುಭವ ಉಂಟಾಗಲಿದೆ. ಎಲ್ಲ ವಸ್ತುಗಳು ಹೋಲ್‌ಸೇಲ್ ದರದಲ್ಲಿ ಲಭ್ಯ ಇವೆ. ಹೆಚ್ಚಿನ ಮಾಹಿತಿಗಾಗಿ ಬಾವ ಮೆಟ್ರೊ ಫರ್ನಿಚರ್ ವರ್ಲ್ಡ್ ಶೋರೂಂನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News