ನರಿಂಗಾನ ಗ್ರಾಪಂ ಸದಸ್ಯನಿಂದ ಮಾಜಿ ಸದಸ್ಯೆಗೆ ಜೀವ ಬೆದರಿಕೆ : ದೂರು

Update: 2021-01-09 18:20 GMT

ಕೊಣಾಜೆ : ನರಿಂಗಾನ ಗ್ರಾಮ ಪಂಚಾಯತ್ ಸದಸ್ಯನೋರ್ವ ಮಾಜಿ ಸದಸ್ಯೆಗೆ ಜಾತಿ ನಿಂದನೆಗೈದು, ಜೀವ ಬೆದರಿಕೆ ಹಾಕಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಂಚಾಯತ್ ಸದಸ್ಯ ಮುರಳೀಧರ ಆರೋಪಿಯಾಗಿದ್ದು, ಮಾಜಿ ಸದಸ್ಯೆ ಬೇಬಿ ದೂರುದಾರರು. ತಮ್ಮ ವಾರ್ಡ್ ನಲ್ಲಿ ಮೀಸಲಿಟ್ಟಿರುವ ಅನುದಾನವನ್ನು ಬೇರೆ ಕೆಲಸಕ್ಕೆ ಬಳಸದಂತೆ ಬೇಬಿ ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ಆರೋಪಿ, ಬೇಬಿ ಅವರಿಗೆ ಜಾತಿ ನಿಂದನೆಗೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News