×
Ad

ಕಿನ್ಯ: ಉಚಿತ ವಾರದ ಚಿಕಿತ್ಸಾಲಯ ಉದ್ಘಾಟನೆ

Update: 2021-01-10 17:23 IST

ಉಳ್ಳಾಲ : ಜನರ ಮನಸು ಮತ್ತು ಅವರ ಆರೋಗ್ಯ ಇಂತಹ ಯೋಜನೆಗಳಿಂದ ಚೇತರಿಕೆ ಕಾಣಲು ಸಾಧ್ಯ. ಇದನ್ನು ಊರಿನ ಜನರೇ ನಡೆಸಿದರೆ ಪ್ರಯೋಜನ ಜಾಸ್ತಿ ಸಿಗುತ್ತದೆ. ಆದರೆ ಅಗತ್ಯ ಬಿದ್ದರೆ ನಾನು ಕೂಡ ಇಂತಹ ಯೋಜನೆಗಳಿಗೆ ನೆರವಾಗುತ್ತೇನೆ ಎಂದು ಡಾ. ರಾಮ್ ಪ್ರಕಾಶ್ ಹೇಳಿದರು.

ಅವರು 'ಗೋಲ್ಡನ್ ವೆಲ್ಫೇರ್ ಸೊಸೈಟಿ ಕಿನ್ಯ' ಇದರ ಆಶ್ರಯದಲ್ಲಿ ಕಿನ್ಯದಲ್ಲಿ ರವಿವಾರ ನಡೆದ ಆರೋಗ್ಯಕ್ಕಾಗಿ ಬೆಂಬಲ ಎಂಬ ನಿರಂತರ ಆರೋಗ್ಯ ಸಮಾಜ ಸೇವಾ ಕಾರ್ಯಕ್ರಮಗಳ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರ ಹಾಗೂ ಉಚಿತ ವಾರದ ಚಿಕಿತ್ಸಾಲಯವನ್ನು ಉದ್ಘಾಟಿಸಿ ಮಾತನಾಡಿದರು.

ನುರಿತ ವೈದ್ಯ ಡಾ. ರಾಮ್ ಪ್ರಕಾಶ್ ಎಂ.ಡಿ., ಡಾ. ಅಫ್ರಾ ಇಸ್ಮಾಯಿಲ್ ಶಿಬಿರ ನಡೆಸಿಕೊಟ್ಟರು. ಕಿನ್ಯ ಕೇಂದ್ರ ಜುಮಾ ಮಸೀದಿ ಖತೀಬ್ ಫತ್ತಾಹ್ ಫೈಝಿ ದುವಾ ನೆರವೇರಿಸಿದರು.

ಜಿಎಸ್ ಕೆ ಕಿನ್ಯ ಇದರ ಅಧ್ಯಕ್ಷ ಮೂಸಾ ಅಬ್ಬಾಸ್ ಕುರಿಯಕಾರ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಕೆ.ಸಿ. ಇಸ್ಮಾಯಿಲ್ ಕಿನ್ಯ, ಕಾರ್ಯದರ್ಶಿ ಅಬ್ದುಲ್ ಖಾದರ್, ಕೋಶಾಧಿಕಾರಿ ಸಾಧುಕುಂಞಿ ಬಾಗ್, ಕಿನ್ಯ ಗ್ರಾ.ಪಂ. ಸದಸ್ಯ ರಾದ ಫಾರೂಕ್, ಸಿರಾಜ್, ಫಯಾಝ್, ಸಂತೋಷ್ ಮೊಂತೆರೊ, ತ್ವಾಹಾ, ನಝೀರ್ ಎಸ್ ಡಿಎ ಕೋಶಾಧಿಕಾರಿ ಅಬೂಸಾಲಿಹ್ ಕುರಿಯಕಾರ್ ಮೊದಲಾದವರು ಉಪಸ್ಥಿತರಿದ್ದರು.

ಜಿಎಸ್ ಕೆ ಕಾರ್ಯದರ್ಶಿ ಅಬ್ದುಲ್ ಸಮದ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಹಮೀದ್ ಕಿನ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News