ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅಧ್ಯಯನ ಕಾರ್ಯಕ್ರಮ

Update: 2021-01-10 13:41 GMT

ಮಲ್ಪೆ, ಜ.10: ಮಲ್ಪೆ ಸರಕಾರಿ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡುವ ವಿಧಾನದ ಕುರಿತು ಮಾಹಿತಿ ಕಾರ್ಯಕ್ರವುವನ್ನು ಶನಿವಾರ ಆಯೋಜಿಸಲಾಗಿತ್ತು.

ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ, ಸಮಯದ ಸದ್ಬಳಕೆ, ಕಲಿಕಾ ಕೊರತೆ ಗುರುತಿಸಿಕೊಂಡು ಪರಿಹಾರ ಪಡೆಯು ವುದು, ನಿರಂತರ ಶ್ರದ್ದೆಯ ಅಧ್ಯಯನ, ಓದುವ ವಿಧಾನ, ಆತ್ಮವಿಶ್ವಾಸ ಗಳಿಸುವ, ಬರವಣಿಗೆಯ ಮಹತ್ವ ಅಂಶಗಳ ಬಗ್ಗೆ ತಿಳಿಸಿದರು.

ಅದೇ ರೀತಿ ಶಿಕ್ಷಕರಿಗೂ ಕೆಲವು ಸಲಹೆಗಳನ್ನು ನೀಡಿದರು. ಗೈರು ಇರುವ ಮಕ್ಕಳ ಪಾಲಕರ ಮನೆಗೆ ಹೋಗಲು ಮತ್ತು ನಿಧಾನ ಗತಿ ಕಲಿಕೆಯ ಮಕ್ಕಳಿಗೆ ವಿಶೇಷ ಗಮನ ಹರಿಸಲು, ಕೋವಿಡ್ 19ರ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಸೂಚಿಸಿದರು. ಈ ಸಂದರ್ಭದಲ್ಲಿ ವಿಷಯ ಪರಿವೀಕ್ಷಕ ನಾಗರಾಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News