ಎಸೆಸ್ಸೆಫ್ ಸುರತ್ಕಲ್ ಸೆಕ್ಟರ್‌ನ ಮಹಾಸಭೆ
Update: 2021-01-10 20:46 IST
ಮಂಗಳೂರು, ಜ.10: ಎಸೆಸ್ಸೆಫ್ ಸುರತ್ಕಲ್ ಸೆಕ್ಟರ್‌ನ ಮಹಾಸಭೆಯು ಎಸೆಸ್ಸೆಫ್ ಸುರತ್ಕಲ್ ಡಿವಿಜನ್ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು. ಪ್ರಸ್ತುತ ಮಹಾಸಭೆಯಲ್ಲಿ 11 ಪದಾಧಿಕಾರಿಗಳನ್ನು ಹಾಗೂ 12 ಕಾರ್ಯಕಾರಿ ಸದಸ್ಯರನ್ನೊಳಗೊಂಡ ಸಮಿತಿ ಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ರಶೀದ್ ಸಅದಿ ಅಂಗರಗುಂಡಿ, ಪ್ರಧಾನ ಕಾರ್ಯದರ್ಶಿಯಾಗಿ ನಈಮ್ ಸುರತ್ಕಲ್, ಕೋಶಾಧಿಕಾರಿಯಾಗಿ ಜುನೈದ್ ಮುಕ್ಕ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ಸುರತ್ಕಲ್ ಸೆಕ್ಟರ್ ವೀಕ್ಷಕರಾಗಿ ಆಗಮಿಸಿದ ಶಂಶುದ್ದೀನ್ ಅಹ್ಸನಿ ಬಳ್ಕುಂಜೆ, ಎಸೆಸ್ಸೆಫ್ ಜಿಲ್ಲಾ ಸದಸ್ಯ ಆರಿಫ್ ಝುಹ್ರಿ ಮುಕ್ಕ, ವೆಸ್ಟ್ ರೆನ್ ಸದಸ್ಯ ಹನೀಫ್ ಅಹ್ಸನಿ ಶೇಡಿಗುರಿ, ಇಸ್ಹಾಕ್ ಸುರತ್ಕಲ್, ಖಾದರ್ ಬದ್ರಿಯಾನಗರ, ರಪ್ತಾನ್ ಮುಸ್ಲಿಯಾರ್, ಅಝರ್ ಚೊಕ್ಕಬೆಟ್ಟು, ಎಸೆಸ್ಸೆಫ್ ಸುರತ್ಕಲ್ ಡಿವಿಜನ್ ಸದಸ್ಯ ತೌಸೀಫ್ ಬದ್ರಿಯಾನಗರ ಉಪಸ್ಥಿತರಿದ್ದರು.