ಜ.19-20: ಗುತ್ತುದ ವರ್ಸೊದ ಪರ್ಬ

Update: 2021-01-10 15:24 GMT

ಗುರುಪುರ, ಜ.10: ಗುರುಪುರ ಗೋಳಿದಡಿ ಗುತ್ತಿನ ‘ಗುತ್ತುದ ವರ್ಸೊದ ಪರ್ಬೊ’ ಜ.19 ಮತ್ತು 20ರಂದು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಜ. 19ರಂದು ಬೆಳಗ್ಗೆ ಶ್ರೀ ವೈದ್ಯನಾಥಾದ್ಯ ಪಂಚ ದೈವಗಳಿಗೆ ಪೂಜೆ, 10:30ರಿಂದ ಮಧ್ಯಾಹ್ನ 12:30ರವರೆಗೆ ಗೋಳಿದಡಿ ಗುತ್ತಿನ ಚಾವಡಿ ಮಿತ್ರ ಬಳಗದವರಿಂದ ‘ಭಜನಾ ಸಂಕೀರ್ತನೆ’ ಜರುಗಲಿದೆ. ಸಂಜೆ 6ರಿಂದ ರಾತ್ರಿ 11ರವರೆಗೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಮೇಳದವರಿಂದ ‘ಶ್ರೀ ನಾಗವೃಜ ಕ್ಷೇತ್ರ ಮಹಾತ್ಮೆ’ ಕಾಲಮಿತಿ ಯಕ್ಷಗಾನ ಬಯಲಾಟ ಪ್ರದರ್ಶನ ಗೊಳ್ಳಲಿದೆ ಎಂದು ಗೋಳಿದಡಿ ಗುತ್ತಿನ ಗಡಿಕಾರ ಶ್ರೀ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿಯವರ ಪತ್ರಿಕಾ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News