ಜ.11: ‘ಸಾಹೇಬ್ರು ಬಂದವೆ’ ಅರೆಭಾಷೆ ನಾಟಕ
Update: 2021-01-10 21:03 IST
ಮಂಗಳೂರು, ಜ.10: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಪ್ರಸ್ತುತಿಯಲ್ಲಿ ಜ.11ರಂದು ಸಂಜೆ 6:30ಕ್ಕೆ ನಗರದ ನಂತೂರು ಬಳಿಯ ಪಾದುವ ಕಾಲೇಜಿನಲ್ಲಿ ‘ಸಾಹೇಬ್ರು ಬಂದವೆ’ ಅರೆಭಾಷೆ ನಾಟಕ ಪ್ರದರ್ಶನಗೊಳ್ಳಲಿದೆ.
ಜಯಪ್ರಕಾಶ್ ಕುಕ್ಕೇಟಿ ಅರೆಭಾಷೆಗೆ ಅನುವಾದಿಸಿರುವ ಈ ನಾಟಕವನ್ನು ಜೀವನ್ ರಾಂ ಸುಳ್ಯ ನಿರ್ದೇಶಿಸಿದ್ದಾರೆ. ಅಸ್ತಿತ್ವ ಮಂಗಳೂರು ವತಿಯಿಂದ ಪಾದುವ ರಂಗ ಅಧ್ಯಯನ ಕೇಂದ್ರ, ಅರೆಹೊಳೆ ಪ್ರತಿಷ್ಠಾನ ಸಹಕಾರದಲ್ಲಿ ರಂಗಹಬ್ಬ 2021- ಬಹುಭಾಷಾ ನಾಟಕೋತ್ಸವ ಅಂಗವಾಗಿ ಈ ನಾಟಕ ಪ್ರದರ್ಶನಗೊಳ್ಳಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಡೆಯುವ ನಾಟಕಕ್ಕೆ ಪ್ರವೇಶ ಉಚಿತ ಎಂದು ಪ್ರಕಟನೆ ತಿಳಿಸಿದೆ.