×
Ad

ಸಪ್ತೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ

Update: 2021-01-10 21:58 IST

ಉಡುಪಿ, ಜ.10: ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ವಿಶ್ವಗುರು ಶ್ರೀಮನ್ಮಧ್ವಾ ಚಾರ್ಯರು ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ಪ್ರಯುಕ್ತ ಮಠದ ರಾಜಾಂಗಣದ ನರಹರಿ ತೀರ್ಥ ವೇದಿಕೆಯಲ್ಲಿ ಇಂದು ನಡೆದ ಸಪ್ತೋತ್ಸವ ಕಾರ್ಯಕ್ರಮದಲ್ಲಿ ವಿವಿ ಸಾಧಕರನ್ನು ಸನ್ಮಾನಿಸಲಾಯಿತು.

ವಿವಿಧ ಕ್ಷೆತ್ರಗಳಲ್ಲಿ ಸಾಧನೆಗೈದ ಮಹನೀಯರಾದ ವಿದ್ವಾನ್ ಸದ್ಯೋಜಾತ ಭಟ್, ಶೀರೂರು ಮುಖ್ಯಪ್ರಾಣ ದೇವರ ಅರ್ಚಕ ಎಂ.ಲಕ್ಷ್ಮೀನಾರಾಯಣ ಭಟ್ ಮತ್ತು ಋಗ್ವೇದ ವಿದ್ವಾಂಸ ಅಂಬಲಪಾಡಿ ಭಾರತೀಶ ಬಲ್ಲಾಳ್ ಸನ್ಮಾನಿಸಲಾಯಿತು.

ಅದಮಾರು ಪರ್ಯಾಯ ಮಠಾಧೀಶ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಕಾಪು ಶಾಸಕ ಲಾಾಜಿ ಆರ್.ಮೆಂಡನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News