ಜ.12ರಂದು ಮೀಡಿಯಾ ಹೆಲ್ತ್ ಕ್ಲಿನಿಕ್ ಗೆ ಚಾಲನೆ
ಮಂಗಳೂರು : ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮತ್ತು ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಎ.ಜೆ.ಆಸ್ಪತ್ರೆಯ ವತಿಯಿಂದ ಪತ್ರಕರ್ತರು ಮತ್ತು ಅವರ ಕುಟುಂಬದ ಆರೋಗ್ಯದ ರಕ್ಷಣೆಗಾಗಿ ಪತ್ರಿಕಾ ಭವನದಲ್ಲಿ ಮೀಡಿಯಾ ಹೆಲ್ತ್ ಕ್ಲಿನಿಕ್ ಜ.12ರಂದು ಆರಂಭಗೊಳ್ಳಲಿದೆ.
ಮಂಗಳೂರಿನ ಪೊಲೀಸ್ ಕಮಿಶನರ್ ಶಶಿಕುಮಾರ್ ಚಾಲನೆ ನೀಡಲಿರುವರು. ಈ ಹಿಂದೆ 2019, ಎಪ್ರಿಲ್ 1ರಂದು ಮೀಡಿಯಾ ಕ್ಲಿನಿಕ್ ನ್ನು ಆರಂಭಿಸಲಾಗಿತ್ತು. ಪ್ರತಿ ತಿಂಗಳು 50ಕ್ಕೂ ಅಧಿಕ ಪತ್ರಕರ್ತರು ಇದರ ಪ್ರಯೋಜನ ಪಡೆಯುತ್ತಿದ್ದರು.
ನ.19ರಂದು ಸಾರ್ವಜನಿಕರಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗಿತ್ತು. ಯಶಸ್ವಿಯಾಗಿ ನಡೆಯುತ್ತಿದ್ದ ಮೀಡಿಯಾ ಹೆಲ್ತ್ ಕ್ಲಿನಿಕ್ ನ್ನು ಕೋವಿಡ್ -19 ಕಾರಣದಿಂದಾಗಿ 2020ರ ಎಪ್ರಿಲ್ ನಲ್ಲಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಇದೀಗ ಪತ್ರಕರ್ತರು ಮೀಡಿಯಾ ಕ್ಲಿನಿಕ್ ಪ್ರಾರಂಭಿಸುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಮತ್ತೆ ಮೀಡಿಯಾ ಕ್ಲಿನಿಕ್ ನ್ನು ಆರಂಭಿಲಾಗುತ್ತದೆ. ಮುಂದೆ ಪ್ರತಿ ತಿಂಗಳ ಎರಡನೇ ಮಂಗಳವಾರ ಮೀಡಿಯಾ ಕ್ಲಿನಿಕ್ ನಲ್ಲಿ ತಜ್ಞ ವೈದ್ಯರು ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆ ತನಕ ಲಭ್ಯರಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.