ಪಡುಬಿದ್ರಿ: ಜ.29ರಂದು ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

Update: 2021-01-11 11:59 GMT

ಪಡುಬಿದ್ರಿ: ಕಾಪು ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 29 ಶುಕ್ರವಾರ ಪಡುಬಿದ್ರಿ ಶ್ರೀಮಹಾಲಿಂಗೇಶ್ವರ, ಶ್ರೀಮಹಾಗಣಪತಿ ದೇವಳದ ಸಭಾಂಗಣದಲ್ಲಿ ನಡೆಯಲಿದೆ.

ಕನ್ನಡ ನಾಡು ನುಡಿ ಸಂಸ್ಕಂತಿ, ಪರಂಪರೆಯನ್ನು  ಪ್ರತಿಬಿಂಬಿಸುವ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದ  ನೇತೃತ್ವದಲ್ಲಿ ನಡೆಯಲಿದೆ.

ಶನಿವಾರ ಶಾಲಾ ಸಭಾಂಗಣದಲ್ಲಿ ಊರಿನ ಗಣ್ಯರ ಸಹಭಾಗಿತ್ವದಲ್ಲಿ ಜರುಗಿದ ಸಮ್ಮೇಳನಾ ಪೂರ್ವಸಿದ್ಧತಾ ಸಭೆಯು ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆಯವರ ಅಧ್ಯಕ್ಷತೆಯಲ್ಲಿ ಜರುಗಿತು. 

ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು, ಸಮ್ಮೇಳನಗಳ ಉದ್ದೇಶ ಹಾಗೂ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.

ಸಮ್ಮೇಳನವನ್ನು ಅರ್ಥಪೂರ್ಣವಾಗಿ ನೆರವೇರವೇರಿಸಲು ಸ್ವಾಗತ ಸಮಿತಿ ಹಾಗೂ ವಿವಿಧ ಉಪಸಮಿತಿಗಳ ರಚನೆ ಮಾಡಲಾಯಿತು.

ಸಮ್ಮೇಳನದ ಗೌರವ ಅಧ್ಯಕ್ಷರುಗಳಾಗಿ ಶ್ರೀಕ್ಷೇತ್ರದ ಅನುವಂಶಿಕ ಮೊಕ್ತೇಸರರುಗಳಾದ ರತ್ನಾಕರರಾಜ ಅರಸು ಕಿನ್ಯಕ್ಕ ಬಲ್ಲಾಳರು,  ಮತ್ತು ಪಿ.ವಿಶ್ವನಾಥ ಹೆಗ್ಡೆ ಪೇಟೆಮನೆ. ಸಮ್ಮೇಳನ ಕಾರ್ಯಾಧ್ಯಕ್ಷರಾಗಿ ನಿವೃತ್ತ ಮುಖ್ಯೋಪಾಧ್ಯಾಯ  ಕೆ. ಅನಂತಪಟ್ಟಾಭಿ ರಾವ್, ಕಾರ್ಯದರ್ಶಿಯಾಗಿ ಕಸ್ತೂರಿ ರಾಮಚಂದ್ರ, ಜತೆಕಾರ್ಯದರ್ಶಿಗಳಾಗಿ ಯಶೋದಾ, ರಾಜೇಶ ಶೇರಿಗಾರ್ ಪಡುಬಿದ್ರೆ, ಉಪಾಧ್ಯಕ್ಷರುಗಳು, ವಿವಿಧ ಉಪಸಮಿತಿಗಳ ಸಂಚಾಲಕರುಗಳನ್ನು ಆಯ್ಕೆ ಮಾಡಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ಪರವಾಗಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿರವರು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ರಂಗಕರ್ಮಿ ಡಾ.ಭರತ್‍ಕುಮಾರ್ ಪೊಲಿಪುರವರ ಆಯ್ಕೆಯನ್ನು ಘೋಷಿಸಿದರು.

ಸಭೆಯಲ್ಲಿ ಹಿರಿಯ ಜಾನಪದ ವಿದ್ವಾಂಸ, 2ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಕೆ.ಎಲ್.ಕುಂಡಂತಾಯ, ವೈದ್ಯರಾದ ಡಾ.ವೈ.ಎನ್.ಶೆಟ್ಟಿ,ನಿಕಟಪೂರ್ವ ಸಮ್ಮೇಳನದ ಕಾರ್ಯಾಧ್ಯಕ್ಷ  ದೇವದಾಸ ಹೆಬ್ಬಾರ್, ಕಟ್ಟಿಂಗೇರಿ, ಕಾರ್ಯದರ್ಶಿ ಅಶ್ವಿನ್ ಮಾರೆನ್ಸ್ ಮೂಡುಬೆಳ್ಳೆ, ಪ್ರೌಢ ಶಾಲಾ ಮುಖ್ಯಶಿಕ್ಷಕ ಪಿ.ಕೆ.ಗಣಪತಿ ಭಟ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಮತಿ ಹೆಗಡೆ, ಇನ್ನಾ ಉದಯಕುಮಾರ್ ಶೆಟ್ಟಿ, ಗಣೇಶ ಕೊಟ್ಯಾನ್, ರಮಾಕಾಂತ ಪಿ. ಪಿ.ರಾಮಚಂದ್ರ ನಾವಡ, ಕು.ಯಶೋದಾ, ಸುಧಾ ಆರ್, ನಾವಡ, ಕಸಾಪ ತಾಲೂಕು ಕಾರ್ಯದರ್ಶಿಗಳಾದ ವಿದ್ಯಾಧರ್ ಪುರಾಣಿಕ್, ವಿದ್ಯಾ ಅಮ್ಮಣ್ಣಾಯ, ಕೃಷ್ಣಕುಮಾರ್ ಮಟ್ಟು, ಸುದಕ್ಷಿಣೆ, ನೀಲಾನಂದ ನಾಯ್ಕ್, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಮ್ಮೇಳನ ಕಾರ್ಯದರ್ಶಿ ಕಸ್ತೂರಿ ರಾಮಚಂದ್ರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News