ಉಡುಪಿ: ಸೋಮವಾರ ಜಿಲ್ಲೆಯಲ್ಲಿ ಸೋಂಕಿತರೇ ಇಲ್ಲ

Update: 2021-01-11 13:32 GMT

ಉಡುಪಿ, ಜ.11: ಕಳೆದ ವರ್ಷದ ಮೇ ತಿಂಗಳ ಬಳಿಕ ಇದೇ ಮೊದಲ ಬಾರಿ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ಒಂದು ಕೋವಿಡ್-19 ಸೋಂಕಿನ ಕೇಸು ಪತ್ತೆಯಾಗಿಲ್ಲ. ಸೋಮವಾರ ಪತ್ತೆಯಾದ ಒಂದೇ ಒಂದು ಕೋವಿಡ್ ಪಾಸಿಟಿವ್ ಕೇಸು ಚಿಕಿತ್ಸೆಗಾಗಿ ಮಣಿಪಾಲಕ್ಕೆ ಹೊರಜಿಲ್ಲೆಯಿಂದ ಬಂದ ಪುರುಷರದ್ದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

20 ಮಂದಿ ಗುಣಮುಖ:  ರವಿವಾರ ಜಿಲ್ಲೆಯ 20 ಮಂದಿ ಚಿಕಿತ್ಸೆ ಬಳಿಕ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿ ನಿಂದ ಮುಕ್ತಿ ಪಡೆದವರ ಸಂಖ್ಯೆ ಈಗ 22,927ಕ್ಕೇರಿದೆ. ಸದ್ಯ 80 ಮಂದಿ ಕೋವಿಡ್‌ಗೆ ಸಕ್ರಿಯರಿದ್ದಾರೆ ಎಂದರು. 

1635 ಮಂದಿ ನೆಗೆಟಿವ್: ರವಿವಾರ ಜಿಲ್ಲೆಯ ಒಟ್ಟು 1639 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 1635 ಮಂದಿಯ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ. ನಾಲ್ವರಲ್ಲಿ ಮಾತ್ರ (ಐಸಿಎಂಆರ್ ವರದಿ) ಸೋಂಕು ಪತ್ತೆಯಾಗಿದೆ. ಈ ಮೂಲಕ ಇದುವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 23,196 ಆಗಿದೆ ಎಂದವರು ತಿಳಿಸಿದರು. ಜಿಲ್ಲೆಯಲ್ಲಿ ರವಿವಾರದವರೆಗೆ ಒಟ್ಟು 3,14,095 ಮಂದಿ ಕೋವಿಡ್ ಪರೀಕ್ಷೆ ಗೊಳಗಾಗಿದ್ದಾರೆ. ಇವರಲ್ಲಿ 2,90,899 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ಒಟ್ಟು 23,196 ಮಂದಿ ಈವರೆಗೆ ಪಾಸಿಟಿವ್ ಬಂದಿದ್ದರೆ, 22,927 ಮಂದಿ ಚೇತರಿಸಿಕೊಂಡಿದ್ದಾರೆ.  ಇಂದು ಸಹ ಜಿಲ್ಲೆಯಲ್ಲಿ ಕೋವಿಡ್‌ಗೆ ಯಾರೂ ಬಲಿಯಾಗಿಲ್ಲ. ಹೀಗಾಗಿ ಇಂದಿನವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 189 ಮಾತ್ರ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News