×
Ad

ನಾಳೆಯಿಂದ ಸಿ-ವಿಜಿಲ್ ಅಣಕು ಕಾರ್ಯಾಚರಣೆ

Update: 2021-01-11 22:03 IST

ಉಡುಪಿ, ಜ11: ಇಂಡಿಯನ್ ಕೋಸ್ಟ್‌ಗಾರ್ಡ್ ಮತ್ತು ಕರಾವಳಿ ಕಾವಲು ಪಡೆ ಮಲ್ಪೆ ಇವುಗಳ ಜಂಟಿ ಸಹಯೋಗದಲ್ಲಿ ಜ.12 ಮತ್ತು 13ರಂದು ‘ಸಿ-ವಿಜಿಲ್’ ಅಣುಕು ಕಾರ್ಯಾಚರಣೆ ಮಂಗಳೂರಿನಿಂದ ಕಾರವಾರದವರೆಗೆ ಪಶ್ಚಿಮ ಕರಾವಳಿಯಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಮೀನುಗಾರರನ್ನು ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ. ಸಾರ್ವಜನಿಕರು ಹಾಗೂ ಮೀನುಗಾರರು ಪೊಲೀಸ ರೊಂದಿಗೆ ಸಹಕರಿಸುವಂತೆ ಮಲ್ಪೆ ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News