ಸುರತ್ಕಲ್: ದೈವಸ್ಥಾನದಿಂದ ಕಳವುಗೈದಿದ್ದ ಚಿನ್ನಾಭರಣ ಸಹಿತ ಆರೋಪಿ ಬಂಧನ

Update: 2021-01-11 16:54 GMT

ಮಂಗಳೂರು, ಜ.11: ದೈವಸ್ಥಾನ, ಭಜನಾ ಮಂದಿರಗಳಿಂದ ಕಳವು ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯನ್ನು ಸುರತ್ಕಲ್ ಠಾಣೆ ಪೊಲೀಸರು ಬಂಧಿಸಿದ್ದು, 13 ಲಕ್ಷ ರೂ. ಮೌಲ್ಯದ ಬೆಳ್ಳಿ- ಬಂಗಾರದ ಸೊತ್ತು ವಶಪಡಿಸಿಕೊಂಡಿದ್ದಾರೆ.

ಮೂಲತಃ ಧಾರವಾಡ ತಾಲೂಕಿನ ಪ್ರಸ್ತುತ ಉಡುಪಿ ಜಿಲ್ಲೆಯ ಇಂದ್ರಾಳಿ ಸಮೀಪದ ಮಂಚಿ ಗ್ರಾಮ ನಿವಾಸಿ ರಾಜೇಶ್ ನಾಯ್ಕಾ ಯಾನೆ ರಾಜು ಪಾಮಡಿ ಬಂಧಿತ ಆರೋಪಿ.

ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಳಾಯಿ ನಂದನಜಲು ರವಿ ಶೆಟ್ಟಿಯವರ ಮನೆಯ ದೈವಸ್ಥಾನ, ಇಡ್ಯಾ ಗ್ರಾಮದ ಗುಡ್ಡೆಕೊಪ್ಪಳ ಜಾರು ಮನೆ ದೈವಸ್ಥಾನ ಹಾಗೂ ಶ್ರೀ ರಾಮಾಂಜನೇಯ ಭಜನಾ ಮಂದಿರ, ಚಿತ್ರಾಪುರ ಗ್ರಾಮದ ಸತೀಶ್ ಸುವರ್ಣರ ಮನೆಯ ದೈವಸ್ಥಾನಗಳಲ್ಲಿ ಕಳವು ಕೃತ್ಯ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತನಿಂದ ಪೊಲೀಸರು 47 ಗ್ರಾಂ ತೂಕದ ಚಿನ್ನದ ಹಾಗೂ 16 ಕೆ.ಜಿ. ತೂಕದ ಬೆಳ್ಳಿಯ ಸೊತ್ತು ವಶಪಡಿಸಿದ್ದಾರೆ. ಇದರ ಒಟ್ಟು ಮೌಲ್ಯ 13.52 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News