×
Ad

ಮಂಗಳೂರಿನಿಂದ ಮಂತ್ರಾಲಯಕ್ಕೆ ನಾನ್ ಎಸಿ ಸ್ಲೀಪರ್ ಬಸ್ ಆರಂಭ

Update: 2021-01-11 22:46 IST
ಸಾಂದರರ್ಭಿಕ ಚಿತ್ರ

ಮಂಗಳೂರು, ಜ.11: ಮಂಗಳೂರು ವಿಭಾಗದಿಂದ ಮಂತ್ರಾಲಯಕ್ಕೆ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ನಾನ್ ಎಸಿ ಸ್ಲೀಪರ್ ನೂತನ ಸಾರಿಗೆಯು ಜ.14ರಿಂದ ಪ್ರಾರಂಭಗೊಳ್ಳಲಿದೆ.

ಸಾರಿಗೆಯು ಮಂಗಳೂರಿನಿಂದ ಮಧ್ಯಾಹ್ನ 3:30ಕ್ಕೆ ಹೊರಟು ಉಡುಪಿ 4:45ಕ್ಕೆ, ಕುಂದಾಪುರ 5:30ಕ್ಕೆ, ಸಿದ್ದಾಪುರ 6:30ಕ್ಕೆ, ಮಾಸ್ತಿಕಟ್ಟೆ 7 ಗಂಟೆ, ತೀರ್ಥಹಳ್ಳಿ 8:05ಕ್ಕೆ, ಶಿವಮೊಗ್ಗ 9:15-9:45ಕ್ಕೆ, ಚಿತ್ರದುರ್ಗ 12:45ಕ್ಕೆ, ಮುಂಜಾನೆ 3:15-3:20ಗಂಟೆಗೆ ಬಳ್ಳಾರಿ ಮಾರ್ಗವಾಗಿ ಮಂತ್ರಾಲಯಕ್ಕೆ ಬೆಳಗ್ಗೆ 6:20ಕ್ಕೆ ತಲುಪಲಿದೆ.

 ಮರು ಪ್ರಯಾಣದಲ್ಲಿ ಮಂತ್ರಾಲಯದಿಂದ ಸಂಜೆ 5:30 ಗಂಟೆಗೆ ಹೊರಟು ಬಳ್ಳಾರಿ 8:30-9 ಗಂಟೆ, ಚಿತ್ರದುರ್ಗ 11:40ಕ್ಕೆ , ಶಿವಮೊಗ್ಗ ಮುಂಜಾನೆ 2:25- 3 ಗಂಟೆ, ತೀರ್ಥಹಳ್ಳಿ 4:10 ಗಂಟೆ, ಮಾಸ್ತಿಕಟ್ಟೆ 5:15 ಗಂಟೆ, ಕುಂದಾಪುರ 6:35 ಗಂಟೆ, ಬೆಳಗ್ಗೆ 7:15 ಗಂಟೆಗೆ ಉಡುಪಿ ಮಾರ್ಗವಾಗಿ ಮಂಗಳೂರಿಗೆ 8:40ಕ್ಕೆ ತಲುಪಲಿದೆ.

ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದೆ. ಸಾರ್ವಜನಿಕರು ಸಾರಿಗೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News