ಮಂಗಳೂರು: ಮೀಡಿಯಾ ಹೆಲ್ತ್ ಕ್ಲಿನಿಕ್ ಪುನಾರಂಭ
Update: 2021-01-12 11:33 IST
ಮಂಗಳೂರು, ಜ.12: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆಯುತ್ತಿದ್ದ ಮೀಡಿಯಾ ಹೆಲ್ತ್ ಕ್ಲಿನಿಕ್ ಮಂಗಳವಾರದಿಂದ ಪುನಾರಂಭಗೊಂಡಿದೆ.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಆರೋಗ್ಯ ತಪಾಸಣೆಗೆ ಒಳಗಾಗುವ ಮೂಲಕ ಕ್ಲಿನಿಕ್ ಗೆ ಮರು ಚಾಲನೆ ನೀಡಿದರು.
ಕೊರೊನದಿಂದಾಗಿ ಸ್ಥಗಿತಗೊಂಡಿದ್ದ ಮೀಡಿಯಾ ಕ್ಲಿನಿಕ್ ಮತ್ತೆ ಆರಂಭಗೊಂಡಿದ್ದು, ಸಂಘದ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಕರೆ ನೀಡಿದರು.