×
Ad

ಆನ್‌ಲೈನ್ ಸ್ಫರ್ಧಾತ್ಮಕ ಪರೀಕ್ಷಾ : ನೇಮಕಾತಿಗೆ ಅರ್ಜಿ ಆಹ್ವಾನ

Update: 2021-01-12 20:30 IST

ಉಡುಪಿ, ಜ12: ಸ್ಟಾಪ್ ಸೆಲೆಕ್ಷನ್ ಕಮೀಷನ್ ಕೇಂದ್ರ ನೇಮಕಾತಿ ಪ್ರಾಧಿಕಾರ ಸಂಯೋಜಿತ ಪದವಿ ಮಟ್ಟದ ಪರೀಕ್ಷೆ- 2020 ಹುದ್ದೆಗಳಿಗೆ ಕಂಪ್ಯೂಟರ್ ಆನ್‌ಲೈನ್ ಸ್ಫರ್ದಾತ್ಮಕ ಪರೀಕ್ಷಾ ನೇಮಕಾತಿಗೆ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸಾಮಾನ್ಯ ಪದವಿ ಶಿಕ್ಷಣ ಅಥವಾ ತತ್ಸಮಾನ ಪದವಿ ಹೊಂದಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳ ಮೂಲಕ ಪ್ರಮಾಣಪತ್ರ ಹೊಂದಿರುವ ಅ್ಯರ್ಥಿ ಗಳು ಆನ್‌ಲೈನ್-http://ssc.nic.in-ನಲ್ಲಿ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್ ನೊಂದಣಿಗೆ ಜನವರಿ 31 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 080-25502520, 0820-2574869ನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News