ಎಂ.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಪ್ರವೇಶಕ್ಕೆ ಅರ್ಜಿ ಆಹ್ವಾನ
ಉಡುಪಿ, ಜ.12: ಮೈಸೂರು ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಎಂ.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕಾಗಿ ಪಿಜಿಸಿಇಟಿ ಬರೆದ ಬಿಇ- ಮೆಕ್ಯಾನಿಕಲ್/ ಇಂಡಸ್ಟ್ರೀಯಲ್ ಪ್ರೊಡಕ್ಷನ್/ಆಟೋ ಮೊಬೈಲ್/ ಮೇರಿನ್/ ಆಟೋ ಮೇಷನ್ ಮತ್ತು ರೋಬೋಟಿಕ್ಸ್ ಇಂಜಿನಿಯರಿಂಗ್‌ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಎಐಸಿಟಿಇ ಮತ್ತು ವಿಟಿಯು ನಿಂದ ಅನುಮೋದನೆ ಪಡೆದ ಎರಡು ವರ್ಷ ಅವಧಿಯ ಎಂ.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಪ್ರವೇಶಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗುವುದು. ಅರ್ಜಿ ಸಲ್ಲಿಸಲು ಜನವರಿ 21 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ. 93 ಮತ್ತು 94, ಬೆಳಗೊಳ ಕೈಗಾರಿಕಾ ಪ್ರದೇಶ, ಕೆ.ಆರ್.ಎಸ್ ರಸ್ತೆ, ಮೈಸೂರು, ಮೊ.ನಂ: 9243989954, ದೂ.ಸಂಖ್ಯೆ: 0821-2582750 ಅನ್ನು ಸಂಪರ್ಕಿಸುವಂತೆ ಮೈಸೂರು ಜಿ.ಟಿ.ಟಿ.ಸಿ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.