ಕೃಷಿ ಕಾಯ್ದೆಯ ಪರ ಇರುವವರನ್ನು ಸಮಿತಿಗೆ ನೇಮಿಸಿದ ಸುಪ್ರೀಂ ಕೋರ್ಟ್: ‘ಮ್ಯಾಚ್ ಫಿಕ್ಸಿಂಗ್’ ಎಂದ ನೆಟ್ಟಿಗರು

Update: 2021-01-12 16:40 GMT

ಹೊಸದಿಲ್ಲಿ,ಜ.12: ನೂತನ ಕೃಷಿ ಕಾಯ್ದೆಗೆ ಸುಪ್ರೀಂ ಕೋರ್ಟ್ ಇಂದು ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಅಲ್ಲದೇ, ಈ ಕುರಿತಾದಂತೆ ಅಶೋಕ್ ಗುಲಾಟಿ, ಅನಿಲ್ ಗನ್ವಾಟ್, ಪಿ.ಕೆ ಜೋಶಿ ಹಾಗೂ ಭೂಪಿಂದರ್ ಸಿಂಗ್ ಮನ್ ಸೇರಿದಂತೆ ನಾಲ್ಕು ಮಂದಿಯ ಸಮಿತಿಯನ್ನು ರಚಿಸಲಾಗಿದೆ. ಇದೀಗ ಈ ಸಮಿತಿಯ ಕುರಿತಾದಂತೆ ಅಪಸ್ವರಗಳು ಕೇಳಿ ಬರುತ್ತಿದೆ. ಸ್ವತಃ ರೈತರೇ ಈ ಸಮಿತಿಯನ್ನು ತಿರಸ್ಕರಿಸಿದ್ದು, ಕೃಷಿ ಕಾಯ್ದೆಯ ಪರ ಇರುವವರನ್ನೇ ಸುಪ್ರೀಂ ಕೋರ್ಟ್‌ ಹಿಂಬಾಗಿಲಿನ ಮೂಲಕ ಸಮಿತಿಗಾಗಿ ನೇಮಿಸಿದ್ದಾರೆಂದು ರೈತರು ಆರೋಪಿಸಿದ್ದಾಗಿ ವರದಿಯಾಗಿದೆ.

ಸಾಮಾಜಿಕ ಜಾಲತಾಣದಾದ್ಯಂತ ನೆಟ್ಟಿಗರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇವತ್ತು ನಡೆದ ಕಲಾಪದಲ್ಲಿ ಕೇಂದ್ರ ಸರಕಾರದ ಪರ ವಹಿಸಿದ್ದ ಅಟಾರ್ನಿ ಜನರಲ್‌ ವೇಣುಗೋಪಾಲ್‌, ಸುಪ್ರೀಂ ಕೋರ್ಟ್‌ ಕೃಷಿ ಕಾಯ್ದೆಗೆ ತಾತ್ಕಾಳಿಕ ತಡೆಯಾಜ್ಞೆ ನೀಡಿದ್ದನ್ನು ಒಮ್ಮೆಯೂ ಪ್ರಶ್ನಿಸಲಿಲ್ಲ. ಪುಟ್ಟ ಮಗುವಿಗೂ ಇದೊಂದು ಮ್ಯಾಚ್‌ ಫಿಕ್ಸಿಂಗ್‌ ಎಂದು ತಿಳಿಯುತ್ತದೆ” ಎಂದು ಟ್ವಿಟರ್‌ ಬಳಕೆದಾರರೋರ್ವರು ಹೇಳಿಕೆ ನೀಡಿದ್ದಾರೆ.

“ಸುಪ್ರೀಂ ಕೋರ್ಟ್‌ ನೇಮಿಸಿರುವ ಸಮಿತಿಯು ತಮ್ಮ ವರದಿಯನ್ನು ಸಲ್ಲಿಸಲು 2 ತಿಂಗಳಿಗಿಂತ ಹೆಚ್ಚು ಸಮಯ ಬೇಕಾಗಬಹುದು. ಅಲ್ಲಿಯವರೆಗೆ ರೈತರು ಪ್ರತಿಭಟನೆ ನಡೆಸಬಹುದು, ರಸ್ತೆಯಲ್ಲೇ ಸಾಯಬಹುದು. ಸುಪ್ರೀಂ ಕೋರ್ಟ್‌ ಮತ್ತು ಮೋದಿ ಸರಕಾರಕ್ಕೆ ಇದ್ಯಾವುದೂ ಲೆಕ್ಕಕ್ಕಿಲ್ಲ. ಇನ್ನು ಏನು ಮಾಡಬೇಕೆಂದು ಜನರೇ ತೀರ್ಮಾನಿಸಬೇಕು” ಎಂದು ವ್ಯಕ್ತಿಯೋರ್ವರು ಟ್ವೀಟ್‌ ಮಾಡಿದ್ದಾರೆ.

ಇನ್ನೂ ಹಲವು ಟ್ವೀಟ್‌ ಗಳು ಈ ಕೆಳಗಿನಂತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News