ವಕ್ಫ್ ಅಧಿಕಾರಿಯ ನೇಮಕಕ್ಕೆ ಆಗ್ರಹ
Update: 2021-01-12 21:39 IST
ಉಡುಪಿ, ಜ.12: ಕಳೆದ 3 ವರ್ಷಗಳ ಸುದೀರ್ಘ ಅವಧಿಯಿಂದ ತೆರ ವಾಗಿರುವ ಉಡುಪಿ ಜಿಲ್ಲಾ ವಕ್ಫ್ ಅಧಿಕಾರಿ ಹುದ್ದೆಗೆ ಶೀಘ್ರ ನೇಮಕಾತಿ ಮಾಡುವಂತೆ ಸಾಮಾಜಿಕ ಕಾರ್ಯಕರ್ತ ಎಂ.ಪಿ.ಮೊಯ್ದಿನಬ್ಬ ರಾಜ್ಯ ವಕ್ಫ್ ಮಂಡಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಯವರನ್ನು ಒತ್ತಾಯಿಸಿದ್ದಾರೆ.
ಉಡುಪಿ ಜಿಲ್ಲೆಯ ವಕ್ಫ್ ಕಚೇರಿಯಲ್ಲಿ ಸುಧೀರ್ಘ ಅವಧಿಯಿಂದ ಲೆಕ್ಕ ಪರಿಶೋಧಕರೇ ವಕ್ಫ್ ಅಧಿಕಾರಿಯ ಪ್ರಭಾರವನ್ನು ನಿರ್ವಹಿ ಸುತ್ತಿದ್ದು ಇದರಿಂದ ಆಧಿಕಾರಿಗೆ ಯಾವ ಕೆಲಸವನ್ನೂ ಸಕಾಲದಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲ. ಇದು ವಕ್ಫ್ ಸಂಸ್ಥೆಗಳ ಆಡಳಿತದಲ್ಲಿ ಮತ್ತು ಜಿಲ್ಲೆಯ ಮುಸ್ಲಿಂ ಸಮುದಾಯದ ಕೆಲಸ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಮೊಯಿದಿನಬ್ಬ ಮಂಡಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.