×
Ad

ಗೂಡಂಗಡಿ ತೆರವು ವಿರೋಧಿಸಿ ಮಹಿಳೆಯಿಂದ ಗುಂಡಿಯಲ್ಲಿ ಮಲಗಿ ಪ್ರತಿಭಟನೆ

Update: 2021-01-12 21:41 IST

ಉಡುಪಿ, ಜ.12: ತನ್ನ ಗೂಡಂಗಡಿ ತೆರವುಗೊಳಿಸಿರುವುದನ್ನು ವಿರೋಧಿಸಿ ಮಹಿಳೆಯೊಬ್ಬರು, ಅಡಿಪಾಯ ಹಾಕಲು ತೋಡಿರುವ ಗುಂಡಿಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ ಘಟನೆ ಉಡುಪಿಯಲ್ಲಿ ಸೋಮವಾರ ರಾತ್ರಿ ವೇಳೆ ನಡೆದಿದೆ.

ಉದ್ಯಾವರದ ವನಿತಾ ಎಂಬವರು ಉಡುಪಿಯ ಮೆಸ್ಕಾಂ ಕಛೇರಿ ಎದುರು ನಗರಸಭೆಯ ಸ್ಥಳದಲ್ಲಿ ಚಿಪ್ಪುಸುಣ್ಣದ ಗೂಡಂಗಡಿ ಇಟ್ಟುಕೊಂಡು ಹಲವು ವರ್ಷಗಳಿಂದ ಬದುಕು ಸಾಗಿಸಿಕೊಂಡಿದ್ದರು. ಅಲ್ಲೇ ಪಕ್ಕದಲ್ಲಿರುವ ಖಾಸಗಿ ಜಾಗದವರು ವನಿತಾಗೆ ಮೂನ್ಸೂಚನೆ ನೀಡದೆ, ಕೌಂಪೌಂಡ್ ಗೊಡೆ ಕಟ್ಟುವ ನೆಪದಲ್ಲಿ ಅವಮಾನಿಯವಾಗಿ ಅವ ಅಂಗಡಿಯನ್ನು ತೆರವುಗೊಳಿಸಿದರು.
ಈ ಬಗ್ಗೆ ರಾತ್ರಿ ಸಮಯದಲ್ಲಿ ವಿಷಯ ತಿಳಿದ ಮಹಿಳೆ, ತಕ್ಷಣ ಮನೆಯಿಂದ ಸ್ಥಳಕ್ಕೆ ಆಗಮಿಸಿದರು. ಗೂಡಂಗಡಿ ತೆರವು ಗೊಳಿಸಿರುವುದನ್ನು ಆಕ್ರೋಶಗೊಂಡ ಅವರು, ಅಡಿಪಾಯ ಹಾಕಲು ತೋಡಿರುವ ಗುಂಡಿಯಲ್ಲಿ ಮಲಗಿ ವಿರೋಧಿ ಸಿದರು. ಇದೇ ವೇಳೆ ನೊಂದ ಮಹಿಳೆಗೆ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿ ದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News