ಬಾವಿಗೆ ಬಿದ್ದು ಮೃತ್ಯು

Update: 2021-01-12 16:15 GMT

ಹಿರಿಯಡ್ಕ, ಜ.12: ವಿಪರೀತ ಕುಡಿತದ ಚಟವನ್ನು ಹೊಂದಿದ್ದ ವ್ಯಕ್ತಿ ಯೊಬ್ಬರು ಆವರಣ ಇಲ್ಲದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಣಜಾರು ಗ್ರಾಮದ ಮದಗ ಎಂಬಲ್ಲಿ ನಡೆದಿದೆ.

ಮೃತರನ್ನು ತನಿಯ ಹರಿಜನ (56) ಎಂದು ಗುರುತಿಸಲಾಗಿದೆ. ಇವರು ಜ.11ರಂದು ಬೆಳಗ್ಗೆ ಕೆಲಸಕ್ಕೆಂದು ಹೋದವರು ರಾತ್ರಿ ಯಾದರೂ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಜ.12ರಂದು ಬೆಳಿಗ್ಗೆ ಇವರ ಮೃತದೇಹವು ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಮದ್ಯ ಸೇವನೆ ಚಟ ಹೊಂದಿರುವ ಇವರು ಕೆಲಸಕ್ಕೆ ಹೋಗಿ ವಾಪಾಸು ಮನೆಗೆ ಬರುವಾಗ ಕಾಲು ಜಾರಿ ಆವರಣ ಇಲ್ಲದ ಬಾವಿಗೆ ಬಿದ್ದು ಮೃತಪಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News